ರಾಜ್ ಕೋಟ್: ಐಪಿಎಲ್ 10ನೇ ಆವೃತ್ತಿಯಲ್ಲಿ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಗುಜರಾತ್ ಲಯನ್ಸ್ ತಂಡ ಕೊನೆಗೂ ಮೊದಲ ಗೆಲುವು ಸಾಧಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪುಣೆ ತಂಡ 8 ವಿಕೆಟ್ ಗೆ 171 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು. 172 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ಲಯನ್ಸ್ ಪರ ಮೆಕ್ಕಲಂ ಮತ್ತು ಡ್ವೇನ್ ಸ್ಮಿತ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 18 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.
ಇನ್ನು ಪುಣೆ ಪರ ರಾಹುಲ್ ತ್ರಿಪಾಠಿ 33, ನಾಯಕ ಸ್ಟೀವನ್ ಸ್ಮಿತ್ 43 ರನ್ ನೆರವಿನೊಂದಿಗೆ ಪುಣೆ ತಂಡ 171 ರನ್ ಗಳಿಸಲು ಸಾಧ್ಯವಾಯಿತು. ಗುಜರಾತ್ ಲಯನ್ಸ್ ಪರ ಆಂಡ್ಯ್ರೂ ಟೈ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.