ಕ್ರಿಕೆಟ್

ಮ್ಯಾಚ್ ಫಿಕ್ಸಿಂಗ್ ಆರೋಪ: ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಟ್ಸೊಟ್ಸೋಬೆ ಅನಿರ್ಧಿಷ್ಟಾವಧಿಗೆ ಅಮಾನತು!

Srinivasamurthy VN

ಕೇಪ್ ಟೌನ್: ಮ್ಯಾಚ್ ಫಿಕ್ಸಿಂಗ್ ಆರೋಪದಡಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಲೋನ್ವಾಬೋ ಟ್ಸೊಟ್ಸೋಬೆ ಅವರನ್ನು ಅನಿರ್ಧಿಷ್ಟಾವಧಿ ಕಾಲ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

2015-16ರಲ್ಲಿ ನಡೆದಿದ್ದ ರಾಮ್ ಸ್ಲ್ಯಾಮ್ ಸರಣಿ ವೇಳೆ ಟ್ಸೊಟ್ಸೋಬೆ ಮ್ಯಾಚ್ ಫಿಕ್ಸಿಂಗ್ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಕಳೆದ ಮಾರ್ಚ್ ನಲ್ಲಿ ಈ ಬಗೆಗಿನ ವರದಿಗಳು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ  ಕಾರಣವಾಗಿತ್ತು. ಆದರೆ ಪ್ರಕರಣದಲ್ಲಿ ಕ್ರಿಕೆಟಿಗ ಟ್ಸೊಟ್ಸೋಬೆ ನೇರ ಕೈವಾಡವಿರುವ ಕುರಿತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಯಾವುದೇ ಖಚಿತ ಮಾಹಿತಿಗಳ ಲಭ್ಯವಾಗಿರಲಿಲ್ಲ. ಆದರೆ ನಿನ್ನೆ ಕ್ರಿಕೆಟ್  ಸೌತ್ ಆಫ್ರಿಕಾ ಮಂಡಳಿಗೆ ಲಭ್ಯವಾದ ವರದಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಕ್ರಿಕೆಟಿಗ ಟ್ಸೊಟ್ಸೋಬೆ ಮತ್ತು ಇತರೆ ಮೂಲಕ ಕೈವಾಡದ ಕುರಿತು ಮಾಹಿತಿ ಲಭ್ಯವಾಗಿದೆ.

ಈ ಹಿನ್ನಲೆಯಲ್ಲಿ ಇಂದು ಕಠಿಣ ನಿಲುವು ತಳೆದಿರುವ ಸಂಸ್ಥೆ ಕ್ರಿಕೆಟಿಗ ಟ್ಸೊಟ್ಸೋಬೆ ಅವರನ್ನು ಅನಿರ್ಧಿಷ್ಟಾವಧಿ ಅಮಾನತು ಮಾಡಿದೆ.

ಉತ್ತರ ನೀಡಲು 14 ದಿನಗಳ ಕಾಲಾವಕಾಶ
ಇನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ಪ್ರಶ್ನಿಸಲು ಕ್ರಿಕೆಟಿಗ ಟ್ಸೊಟ್ಸೋಬೆಗೆ 14 ದಿನಗಳ ಕಾಲಾವಕಾಶವಿದ್ದು, ತಮ್ಮದೇನೂ ತಪ್ಪಿಲ್ಲ ಎಂದು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದರೆ ಅಲ್ಲಿ ಪ್ರಕರಣದ  ವಿಚಾರಣೆಯನ್ನು ಕೈಗೆತ್ತಿಗೊಳ್ಳಲಾಗುತ್ತದೆ. ಈ ನ್ಯಾಯಾಧಿಕರಣದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ ಅಧ್ಯಕ್ಷರು ಆಯ್ಕೆ ಮಾಡಿದ ಸದಸ್ಯರು ವಿಚಾರಣೆ ನಡೆಸಲಿದ್ದಾರೆ. ಸದಸ್ಯ ಪಟ್ಟಿಯಲ್ಲಿ ಓರ್ವ ವಕೀಲರು  ಸದಸ್ಯರಾಗಿರುವುದು ಕಡ್ಡಾಯವಾಗಿದೆ.

SCROLL FOR NEXT