ಬಾಲಿವುಡ್ ನಟಿ ಸಾಗರಿಕಾ ಜೊತೆ ಕ್ರಿಕೆಟಿಗ ಜಹೀರ್ ಖಾನ್ ನಿಶ್ಚಿತಾರ್ಥ
ಡೆಲ್ಲಿ ಡೇರ್ಡೆವಿಲ್ಸ್ ತಂಡದ ನಾಯಕ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರ ನಿಶ್ಚಿತಾರ್ಥವು ನೆರವೇರಿದೆ. ಈ ವಿಷಯವನ್ನು ಜಹೀರ್ ಟ್ವಿಟರ್ ...
ನವದೆಹಲಿ: ಡೆಲ್ಲಿ ಡೇರ್ಡೆವಿಲ್ಸ್ ತಂಡದ ನಾಯಕ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟಗೆ ಅವರ ನಿಶ್ಚಿತಾರ್ಥವು ನೆರವೇರಿದೆ. ಈ ವಿಷಯವನ್ನು ಜಹೀರ್ ಟ್ವಿಟರ್ ಮೂಲಕ ಬಹಿರಂಗಗೊಳಿಸಿದ್ದಾರೆ.
ಸಾಗರಿಕಾ ಅವರು ‘ಚಕ್ ದೇ ಇಂಡಿಯಾ’ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು.ಜಹೀರ್ ಮತ್ತು ಸಾಗರಿಕಾ ಅವರು ಬಹುಕಾಲದ ಸ್ನೇಹಿತರಾಗಿದ್ದರು. 38 ವರ್ಷದ ಜಹೀರ್ ಪ್ರಥಮದರ್ಜೆ ಕ್ರಿಕೆಟ್ನಿಂದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.
ನಿಮ್ಮ ಪತ್ನಿಯ ಆಯ್ಕೆಗೆ ನಗಬೇಡಿ. ನೀವೂ ಅದರಲ್ಲೊಬ್ಬರಾಗಿರುತ್ತೀರಿ. ಪಾರ್ಟ್ನರ್ ಫಾರ್ ಲೈಫ್ # ಎಂಗೇಜ್ಡ್ ಎಂದು 38 ವರ್ಷದ ಜಹೀರ್ ನಿಶ್ಚಿತಾರ್ಥವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ. ಸಾಗರಿಕಾ ಎಂಗೇಜ್ವೆುಂಟ್ ರಿಂಗ್ ಪ್ರದರ್ಶಿಸುತ್ತಿರುವ ಮತ್ತು ಇಬ್ಬರೂ ಜತೆಯಾಗಿ ಪೋಸ್ ನೀಡಿರುವ ಚಿತ್ರವನ್ನೂ ಜಹೀರ್ ಪ್ರಕಟಿಸಿದ್ದಾರೆ.
ಶಾರುಖ್ ಖಾನ್ ನಟನೆಯ ‘ಚಕ್ದೇ ಇಂಡಿಯಾ’ ಸಿನಿಮಾದಲ್ಲಿ ಹಾಕಿ ಆಟಗಾರ್ತಿಯಾಗಿ ನಟಿಸುವ ಮೂಲಕ 2007ರಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. 31 ವರ್ಷದ ಸಾಗರಿಕಾ ಕೆಲ ಮರಾಠಿ, ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ.ಅವರು ರಾಷ್ಟ್ರಮಟ್ಟದ ಮಾಜಿ ಅಥ್ಲೀಟ್ ಕೂಡ ಆಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.