ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕ ಬಾಲಿವುಡ್ ನಟ ಶಾರುಖ್ ಖಾನ್ ಎಂಎಸ್ ಧೋನಿಯನ್ನು ಖರೀದಿಸಲು ನನ್ನ ಪೈಜಾಮವನ್ನು ಮಾರಲೂ ಸಿದ್ಧ ಎಂದು ಹೇಳಿದ್ದಾರೆ.
2018ರಲ್ಲಿ ನಡೆಯಲಿರುವ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಎಲ್ಲಾ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯೆ ಇದ್ದು ಎಂಎಸ್ ಧೋನಿಯನ್ನು ಕೆಕೆಆರ್ ತಂಡಕ್ಕೆ ಸೇರಿಕೊಳ್ಳಲು ತಮ್ಮಲ್ಲಿರುವ ಎಲ್ಲವನ್ನೂ ಮಾರಲು ಸಿದ್ಧರಿರುವುದಾಗಿ ಶಾರುಖ್ ಖಾನ್ ಹೇಳಿದ್ದಾರೆ.
ಸ್ಪೋರ್ಟ್ಸ್ ವಾಲ್ಹಾ ವೆಬ್ ಸೈಟ್ ಗೆ ನೀಡಿರುವ ಸಂದರ್ಶನದಲ್ಲಿ ಧೋನಿಯನ್ನು ಖರೀದಿಸಲು ನಾನು ನನ್ನ ಪೈಜಾಮ ಬೇಕಿದ್ದರೂ ಮಾರಲು ಸಿದ್ಧನಿದ್ದೇನೆ. ಅವರು ಹಾರಾಜಿನಲ್ಲಿ ಪಾಲ್ಗೊಳ್ಳಬೇಕಷ್ಟೇ ಅಂದಿದ್ದಾರೆ. ಶಾರುಖ್ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.