ಟೀಂ ಇಂಡಿಯಾ 
ಕ್ರಿಕೆಟ್

ಕೊಲಂಬೊ 2ನೇ ಟೆಸ್ಟ್, 3ನೇ ದಿನ: ಮೊದಲ ಇನ್ನಿಂಗ್ಸ್ ಶ್ರೀಲಂಕಾ 183, ಫಾಲೋ ಆನ್ ಹೇರಿದ ಭಾರತ

ಕೊಲಂಬೋದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ 183 ರನ್ ಗಳಿಗೆ ಆಲೌಟ್ ಆಗಿದ್ದು ಟೀಂ ಇಂಡಿಯಾ ಫಾಲೋ ಆನ್ ಹೇರಿದೆ...

ಕೊಲಂಬೊ: ಕೊಲಂಬೋದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ 183 ರನ್ ಗಳಿಗೆ ಆಲೌಟ್ ಆಗಿದ್ದು ಟೀಂ ಇಂಡಿಯಾ ಫಾಲೋ ಆನ್ ಹೇರಿದೆ. 
ಕೊಲಂಬೊದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಮೂರನೇ ದಿನ ಶ್ರೀಲಂಕಾ 183 ರನ್ ಗಳಿಗೆ ಆಲೌಟ್ ಆಯಿತು. 439 ರನ್ ಗಳ ಮುನ್ನಡೆ ಪಡೆದಿದ್ದ ಟೀಂ ಇಂಡಿಯಾ ಲಂಕಾ ಮೇಲೆ ಫಾಲೋ ಆನ್ ಹೇರಿತು. ಇದರೊಂದಿಗೆ ಮತ್ತೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದೆ. 
ಫಾಲೋ ಆನ್ ನಲ್ಲಿ ಶ್ರೀಲಂಕಾಗೆ ಕರುಣರತ್ನೆ ಮತ್ತು ಮೆಂಡಿಸ್ ಆಸರೆಯಾದರು. ಮೆಂಡಿಸ್ 110 ರನ್ ಹಾಗೂ ಕರುಣರತ್ನೆ ಅಜೇಯ 92 ಸಿಡಿಸಿರುವುದು ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದೆ. ಕರುಣರತ್ನೆ ಮತ್ತು ಪುಷ್ಪಕುಮಾರ ನಾಲ್ಕನೇ ದಿನ ಆರಂಭಿಸಲಿದ್ದಾರೆ. ಭಾರತ ಪರ ಆರ್ ಅಶ್ವಿನ್ 5, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದಿದ್ದಾರೆ. 
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್ ಅನ್ನು 622 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಶ್ರೀಲಂಕಾಗೆ ಆರ್ ಅಶ್ವಿನ್ ಆಘಾತ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ತರಂಗರನ್ನು ಡಕ್ ಔಟ್ ಮಾಡಿದರು. ಇನ್ನು 25 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕರುಣರತ್ನೆ ಅವರ ವಿಕೆಟ್ ಕಿತ್ತರು.
ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 35 ಮತ್ತು ಕೆಎಲ್ ರಾಹುಲ್ 57 ರನ್ ಗಳಿಗೆ ಔಟಾದರೆ ನಾಯಕ ವಿರಾಟ್ ಕೊಹ್ಲಿ ಕೇವಲ 13 ರನ್ ಗಳಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಪೂಜಾರ 133 ಮತ್ತು ಅಜಿಂಕ್ಯ ರಹಾನೆ 132 ರನ್ ಗಳನ್ನು ಸಿಡಿಸಿ ಔಟಾದರು. ಈ ಮಧ್ಯೆ ಆರ್ ಅಶ್ವಿನ್ 54 ರನ್ ಸಿಡಿಸಿದರೆ, ವೃದ್ಧಿಮಾನ್ ಸಹಾ 67 ರನ್ ಸಿಡಿಸಿ ಔಟಾದರು. ನಂತರ ಬಂದ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ನಿಂದಾಗಿ ತಂಡ 600ರ ಗಡಿ ದಾಟಲು ಸಾಧ್ಯವಾಯಿತು. 
ಶ್ರೀಲಂಕಾ ಪರ ಹೆರತ್ 4, ಪುಷ್ಪಕುಮಾರ 2 ಮತ್ತು ಕರುಣರತ್ನೆ ಹಾಗೂ ಪೆರೇರಾ ತಲಾ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್