ಕ್ರಿಕೆಟ್

ಜಡೇಜಾ ಅಮಾನತು: ಐಸಿಸಿ ನಿಯಮಗಳಲ್ಲಿ ಸ್ಥಿರತೆ ಬೇಕು: ವಿರಾಟ್ ಕೊಹ್ಲಿ

Vishwanath S
ಕಾಂಡಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸ್ಪಿನ್ನರ್ ರವೀಂದ್ರ ಜಡೇಜಾ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಒಂದು ಪಂದ್ಯದ ಮೇಲೆ ನಿಷೇಧ ಹೇರಿದ್ದು ಈ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 
ಆಟಗಾರರ ಮೇಲಿ ಐಸಿಸಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸುವಲ್ಲಿ ಮತ್ತಷ್ಟು ಸ್ಥಿರತೆ ತೋರಬೇಕಿದೆ. ಇನ್ನು ಆಟಗಾರರು ಸಹ ಐಸಿಸಿ ನಿಯಮವಳಿಗಳ ಕುರಿತು ಗಮನ ಹರಿಸಬೇಕಿದೆ. ಆದರೆ ಆಟಗಾರರ ಮೇಲೆ ಇಂತಹ ಪ್ರಮುಖ ನಿರ್ಣಯಗಳನ್ನು ಮಾಡುವ ಸಂದರ್ಭದಲ್ಲಿ ಆಡಳಿತ ಮಂಡಳಿಯು ಹೆಚ್ಚಿನ ಸ್ಥಿರತೆ ತೋರಿಸಬೇಕು ಎಂದು ವಿರಾಟ್ ಕೊಹ್ಲಿ ಆಗ್ರಹಿಸಿದ್ದಾರೆ. 
ಐಸಿಸಿ ನಿಯಮಗಳು ಸ್ಥಿರವಾದರೆ, ಮೈದಾನದಲ್ಲಿ ತಮ್ಮನ್ನು ತಾವು ಹೇಗೆ ನಡೆಸಬೇಕು ಎನ್ನುವುದರ ಬಗ್ಗೆ ಆಟಗಾರರು ಹೆಚ್ಚು ಸ್ಪಷ್ಟವಾಗಿ ತಿಳಿದಿದ್ದರೆ, ಇದು ಆಟವನ್ನು ಉತ್ತಮಗೊಳ್ಳಲು ಸಹಾಯ ಮಾಡುತ್ತದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. 
ಲಂಕಾ ವಿರುದ್ಧದ 2ನೇ ಟೆಸ್ಟ್ ನ 3ನೇ ದಿನದಾಟದ ವೇಳೆ 58ನೇ ಓವರ್ ಮಾಡಿದ್ದ ಜಡೇಜಾ ಐಸಿಸಿ ನಿಯಮ ಉಲ್ಲಂಘಿಸಿದ್ದರು. ಜಡೇಜಾ ಎಸೆದ ಚೆಂಡನ್ನು ಲಂಕಾದ ಆಟಗಾರ ದಿಮುತ್ ಕರುಣರತ್ನೆ ರಕ್ಷಣಾತ್ಮಕವಾಗಿ ಆಡಿ ಚೆಂಡನ್ನು ಜಡೇಜಾ ಕೈ ಸೇರುವಂತೆ ಹೊಡೆದಿದ್ದರು. ಕೂಡಲೇ ಜಡೇಜಾ ಚೆಂಡನ್ನು ಅವರತ್ತ ಥ್ರೋ ಮಾಡಿದರು. ಇದು ಬ್ಯಾಟ್ಸಮನ್ ಗೆ ತಗುಲಿಲ್ಲವಾದರೂ ಇದೊಂದು ಅಪಾಯಕಾರಿ ಥ್ರೋ ಆಗಿತ್ತು.
ಈ ಬಗ್ಗೆ ಸ್ವತಃ ಆನ್ ಫೀಲ್ಡ್ ಅಂಪೈರ್ ಜಡೇಜಾಗೆ ಎಚ್ಚರಿಕೆ ನೀಡಿದ್ದರು. ಆ ಕ್ಷಣಕ್ಕೆ ಜಡೇಜಾ ಕ್ಷಮೆ ಕೋರಿದ್ದರು. ಈ ಘಟನೆಯನ್ನು ಮ್ಯಾಚ್ ರೆಫರಿ ಐಸಿಸಿಗೆ ಮಾಹಿತಿ ನೀಡಿದ್ದರು. ಜಡೇಜಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಅವರಿಗೆ ಒಂದು ಪಂದ್ಯದ ನಿಷೇಧ ಹೇರಿತ್ತು. 
SCROLL FOR NEXT