ಕ್ರಿಕೆಟ್

ಪಾಕ್‌ ವಿಶ್ವ ಇಲೆವೆನ್ ಟಿ20ಯಲ್ಲಿ ಭಾರತೀಯ ಆಟಗಾರರು ಆಡಿದ್ದರೆ ಚನ್ನಾಗಿತ್ತು: ಆಫ್ರಿದಿ

Vishwanath S
ಕರಾಚಿ: ಅಭದ್ರತೆ ಕಾರಣ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲು ಯಾವುದೇ ತಂಡ ಮುಂದೆ ಬರುತ್ತಿಲ್ಲ. ಈಗಿರುವಾಗ ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಚಿಗುರಿಸಲು ಅಲ್ಲಿನ ಕ್ರಿಕೆಟ್ ಮಂಡಳಿ ಶತಾಯ ಗತಾಯ ಪ್ರಯತ್ನಿಸುತ್ತಿದ್ದು ಅದರ ಭಾಗವಾಗಿ ಸೆಪ್ಟೆಂಬರ್ ನಲ್ಲಿ ವಿಶ್ವ ಇಲೆವೆನ್ ಟಿ20 ಸರಣಿ ನಡೆಯಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಡೆಸುತ್ತಿರುವ ಈ ಸರಣಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸಹ ಕೈ ಜೋಡಿಸಿದೆ. ಇನ್ನು ಈ ಸರಣಿಯಲ್ಲಿ ಟೀಂ ಇಂಡಿಯಾದ ಯಾವುದೇ ಆಟಗಾರರು ಭಾಗವಹಿಸದ ಹಿನ್ನೆಲೆಯಲ್ಲಿ ಪಾಕ್ ಮಾಜಿ ನಾಯಕ ಶಾಹೀದ್ ಆಫ್ರಿದಿ ಟ್ವೀಟ್ ಮಾಡಿದ್ದು ವಿಶ್ವ ಇಲೆವೆನ್ ಟಿ20 ಸರಣಿಯಲ್ಲಿ ಭಾರತ ತಂಡದ ಆಟಗಾರರು ಭಾಗವಹಿಸಬೇಕು ಎಂದು ಆಹ್ವಾನಿಸಿದ್ದಾರೆ.
ಪಿಸಿಬಿಯ ಇಂತಹದ್ದೊಂದು ನಿರ್ಧಾರ ನಿಜಕ್ಕೂ ಸ್ವಾಗತ. ಒಂದು ವೇಳೆ ಈ ಸರಣಿಯಲ್ಲಿ ಭಾರತೀಯ ಆಟಗಾರರು ಬಂದಿದ್ದರೆ ಇನ್ನೂ ಚನ್ನಾಗಿರುತ್ತಿತ್ತು ಎಂದು ಆಫ್ರಿದಿ ಟ್ವೀಟ್ ಮಾಡಿದ್ದಾರೆ. 
ಇನ್ನು ಗಡಿಯಲ್ಲಿ ಪಾಕಿಸ್ತಾನದ ಉಗ್ರರು ಭಯೋತ್ಪಾದನೆ ನಡೆಸುತ್ತಿರುವುದರಿಂದ ಅದು ನಿಲ್ಲುವವರೆಗೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸಾಧ್ಯವಿಲ್ಲ ಎಂದು ಭಾರತ ಪಟ್ಟು ಹಿಡಿದು ಕೂತಿದೆ. 
SCROLL FOR NEXT