ಕ್ರಿಕೆಟ್

ಕ್ರಿಕೆಟ್ ಜೂಜಿಗೆ ಸಮಾನ, ಆಟಗಾರರನ್ನು ನಾವು ದೂಷಿಸುವಂತಿಲ್ಲ: ಅರ್ಜುನ್ ರಣತುಂಗಾ

Shilpa D
ನವದೆಹಲಿ: ಶ್ರೀಲಂಕಾ ಕ್ರಿಕೆಟ್ ತಂಡದ  ಆತ್ಯಂತ ಪ್ರಭಾವ ಶಾಲಿ ಆಟಗಾರನಾಗಿದ್ದ ಕ್ರಿಕೆಟರ್ ಹಾಗೂ ರಾಜಕಾರಣಿ ಅರ್ಜುನ್ ರಣತುಂಗಾ ಸದಾ ತಮ್ಮ ಟೀಕೆ, ವಿಮರ್ಶೆಗಳಿಂದಲೇ ಪ್ರಸಿದ್ಧರಾದವರು. 
ಇತ್ತೀಚೆಗಂತೂ ತಮ್ಮ ಕಠಿಣ ಶಬ್ದಗಳ ಟೀಕೆಗಳಿಗೆ ರಣತುಂಗಾ ಹೆಸರುವಾಸಿಯಾಗುತ್ತಿದ್ದಾರೆ, ತಮ್ಮ ದೇಶದ ಕ್ರಿಕೆಟ್ ಸ್ಥಿತಿಗತಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಣತುಂಗಾ, ನಿಮಗೆ ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ,  ನಮ್ಮ ಆಡಳಿತ ತುಂಬಾ ಕಳಪೆಯಾಗಿದೆ, ಕ್ರಿಕೆಟ್ ಜೂಜುಗಾರರಿಂದ ನಿಯಂತ್ರಿಸಲ್ಪಡುತ್ತಿದೆ. ಕ್ರಿಕೆಟ್ ಕೂಡ ಬರಬರುತ್ತಾ ಜೂಜಾಟಕ್ಕೆ ಸಮಾನವಾಗುತ್ತಿದೆ, ನಾವು ಆಟಗಾರರನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಪ್ರಸಕ್ಕ ದಿನಗಳಲ್ಲಿ ಏನು ನಡೆಯುತ್ತಿದೆಯೋ ಅದಕ್ಕೆ ನನ್ನ ಸಮ್ಮತಿಯಿಲ್ಲ, ಕ್ರಿಕೆಟ್ ಮಂಡಳಿಯಲ್ಲಿ  ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ ಒಬ್ಬನೇ ಒಬ್ಬ ಕ್ರಿಕೆಟರ್ ಇಲ್ಲದಿರುವುದು ನಮ್ಮ ದುರಾದೃಷ್ಟ, ಅಂಥ ಕೆಲವು ಆಡಳಿತಗಾರರನ್ನು ಹಲವು ವರ್ಷಗಳಿಂದ ಮಂಡಳಿಯಿಂದ ದೂರ ಇಡಲಾಗಿದೆ. ಹೀಗಾಗಿ ಇಡೀ ಎಲ್ಲವೂ ತಪ್ಪಾಗಿ ನಡೆಯುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
SCROLL FOR NEXT