ಟೀಂ ಇಂಡಿಯಾ ಜೆರ್ಸಿ ತೊಟ್ಟ ಶಾರ್ದೂಲ್ ಠಾಕೂರ್ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದರು.
ಮುಂಬೈನ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 10ನೇ ಅಂಕಿಯ ಜೆರ್ಸಿ ಧರಿಸಿ ಕಣಕ್ಕಿಳಿದ್ದು ಇದು ಸಚಿನ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಯಿತು.
ಟ್ವೀಟರ್ ನಲ್ಲಿ ಅಭಿಮಾನಿಗಳು ಶಾರ್ದೂಲ್ ಠಾಕೂರ್ ರನ್ನು ಟೀಕಿಸಿದ್ದಾರೆ. ನಂಬರ್ 10 ಯಾವಾಗಲೂ ಸಚಿನ್ ಗೆ ಮೀಸಲಾಗಿದ್ದು ಅದನ್ನು ಅನ್ಯರು ಧರಿಸುವಂತಹದ್ದನ್ನು ಕಲ್ಪಿಸಲೂ ಸಾಧ್ಯ ಎಂದು ಟ್ವೀಟಿಸಿದ್ದಾರೆ.