ಭಾರತದ ಕಳಪೆ ಬ್ಯಾಟಿಂಗ್ ಲಂಕಾಗೆ 112 ರನ್ ಗಳ ಸುಲಭದ ಗುರಿ
ಧರ್ಮಶಾಲಾ: ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ 38.2 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಎದುರಾಳಿ ತಂಡಕ್ಕೆ 112 ರನ್ ಗಳ ಸುಲಭದ ಗುರಿ ನೀಡಿದೆ.
ಲಂಕಾ ಮಾರಕ ಬೌಲಿಂಗ್ ಗೆ ತತ್ತರಿಸಿದ ಆರಂಭಿಕ ಆಟಗಾರರು ಕನಿಷ್ಠ 2 ಅಂಕಿಯ ರನ್ ಗಳನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಮಹೇಂದ್ರ ಸಿಂಗ್ ಧೋನಿ ಲಂಕಾ ಆಟಗಾರರನ್ನು ಏಕಾಂಗಿಯಾಗಿ ಎದುರಿಸಿ 87 ಎಸೆತಗಳಲ್ಲಿ 65 ರನ್ ಗಳಿಸಿದರು.
ರೋಹಿತ್ ಶರ್ಮಾ (2), ಶಿಖರ್ ಧವನ್ (೦), ಶ್ರೇಯಸ್ ಅಯ್ಯರ್ (9) ದಿನೇಶ್ ಕಾರ್ತಿಕ್ (0) ಮನೀಷ್ ಪಾಂಡೆ (2) ಹಾರ್ದಿಕ್ ಪಾಂಡ್ಯ (10) ಭುವನೇಶ್ವರ್ ಕುಮಾರ್ (0) ಕುಲ್ದೀಪ್ ಯಾದವ್(19) ಜಸ್ಪ್ರೀಪ್ ಭೂಮ್ರಾ (0) ಯಜುವೇಂದ್ರ ಚಾಹಲ್(0) ರನ್ ಗಳನ್ನು ಗಳಿಸಿದ್ದಾರೆ.
ಲಂಕಾ ಪರ ಅತ್ಯುತ್ತಮ ಬೌಲಿಂಗ್ ಮಾಡಿರುವ ಸುರಂಗ ಲಕ್ಮಲ್ 13 ರನ್ ನೀಡಿ 4ವಿಕೆಟ್ ತೆಗೆದಿದ್ದಾರೆ.