ಮೊಹಾಲಿ: ಮೊಹಾಲಿಯಲ್ಲಿ ನಡೆದ ಭಾರತ- ಲಂಕಾ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡದ ವಿರುದ್ಧ 141 ರನ್ ಗಳ ಜಯ ಗಳಿಸಿದ್ದು, ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ರೋಹಿತ್ ಶರ್ಮಾ ದ್ವಿಶತಕದ ನೆರವಿನಿಂದ ಲಂಕಾ ತಂಡಕ್ಕೆ 393 ರನ್ ಗಳ ಗುರಿ ನೀಡಿತ್ತು. ಭಾರತ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡ, ಆರಂಭದಲ್ಲೇ ಮೊದಲ ವಿಕೆಟ್ ಕೆಳೆದುಕೊಂಡಿತು. ಬಳಿಕ ಭಾರತದ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗದೇ ಲಂಕಾ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಹೆಣಗಿದರು. ಶ್ರೀಲಂಕಾ ತಂಡದ ಪರ ಶತಕ ಸಿಡಿಸಿದ ಏಂಜೆಲೋ ಮ್ಯಾಥ್ಯೂಸ್ ವ್ಯರ್ಥವಾಗಿ ಲಂಕಾ ತಂಡ ಭಾರತ ನೀಡಿದ್ದ ಗುರಿಯನ್ನು ಮುಟ್ಟಲಾಗದೇ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 251 ರನ್ ಗಳನ್ನಷ್ಟೇ ಗಳಿಸಿತು.