ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 208 ರನ್ ಗಳಿಂದ ಭರ್ಜರಿ ಜಯಗಳಿಸಿದೆ. ಈ ಮಧ್ಯೆ ಭಾರತದ ವೇಗಿ ಇಶಾಂತ್ ಶರ್ಮಾ ಅವರ ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ದ್ವೀತಿಯ ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾದೇಶ ಅಂತಿಮ ದಿನ ಪಂದ್ಯವನ್ನು ಡ್ರಾಮಾಡಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿತ್ತು. ಬಾಂಗ್ಲಾದೇಶ 5 ವಿಕೆಟ್ ನಷ್ಟಕ್ಕೆ 207 ಗಳಿಸಿತ್ತು. ಆಗ ಕ್ರೀಸ್ ನಲ್ಲಿದ್ದ ಶಬ್ಬೀರ್ ರೆಹಮಾನ್ 18 ರನ್ ಗಳಿಸಿದ್ದು ಇಶಾಂತ್ ಶರ್ಮಾರ ಎಸೆತವನ್ನು ಡಿಪೇನ್ಸ್ ಮಾಡಿದರು. ಬಳಿಕ ಇಶಾಂತ್ ಮತ್ತು ಶಬ್ಬೀರ್ ನಡುವೆ ದೃಷ್ಠಿಯುದ್ಧ ನಡೆಯಿತು. ಕೂಡಲೇ ಇಶಾಂತ್ ಜಾಸ್ತಿ ಗುರಾಯಿಸಬೇಡ ಬ್ಯಾಟಿಂಗ್ ಮಾಡು ಸದ್ಯಕ್ಕೆ ಸುಮ್ಮನೀರು ಎಂದು ಸಲಹೆ ನೀಡುತ್ತಾ ಹಿಂದಿರುಗಿದರು.
ದುರಂಕಾರದ ವರ್ತನೆ ತೋರಿದ ಶಬ್ಬೀರ್ ರೆಹಮಾನ್ ರನ್ನು ನಂತರ ಓವರ್ ನಲ್ಲಿ ಇಶಾಂತ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿ ಪೆವೆಲಿಯನ್ ದಾರಿ ತೋರಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.