ಕ್ರಿಕೆಟ್

ಐಪಿಎಲ್ ಹರಾಜು ಹಿನ್ನಡೆ, ಟ್ವಿಟರ್ ನಲ್ಲಿ ಇರ್ಫಾನ್ ಪಠಾಣ್ ಭಾವನಾತ್ಮಕ ಹೇಳಿಕೆ!

Srinivasamurthy VN

ನವದೆಹಲಿ: ನನ್ನ ದೇಹದ ಮೇಲಿನ ಎಷ್ಟು ಗಾಯಗಳ ನೋವನ್ನು ಬೇಕಿದ್ದರೂ ನಾನು ಭರಿಸುತ್ತೇನೆ, ಆದರೆ ಕ್ರಿಕೆಟ್ ನಿಂದ ದೂರ ಉಳಿದು ಜೀವಿಸಲು ಸಾಧ್ಯವಿಲ್ಲ ಎಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ತಂಡ ಕೂಡ ಇರ್ಫಾನ್ ಪಠಾಣ್ ಅವರನ್ನು ಖರೀದಿ ಮಾಡಿರಲಿಲ್ಲ. ಹೀಗಾಗಿ ಇರ್ಫಾನ್ ಕ್ರಿಕೆಟ್ ಬದುಕು ಮುಗಿದೇ ಹೋಯಿತು ಎಂಬ ರೀತಿಯಲ್ಲಿ  ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿದ್ದು, ಈ ಸಂಬಂಧ ಸ್ವತಃ ಇರ್ಫಾನ್ ಪಠಾಣ್  ಟ್ವಿಟರ್ ನಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. "210ರಲ್ಲಿ ನನ್ನ ಕ್ರಿಕೆಟ್ ಜೀವನದ ಉತ್ತಂಗ ಫಾರ್ಮ್ ನಲ್ಲಿದಾಗ ನನಗೆ 5  ಗಂಭೀರ ಗಾಯಗಳಾಗಿದ್ದವು. ನನ್ನ ಫಿಸಿಯೋ ನಾನು ಬಹುಶಃ ಭವಿಷ್ಯದಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಅಂದು ನಾನು ಅವರಿಗೆ ನಾನು ಎಷ್ಟು ಗಾಯದ ನೋವನ್ನು ಬೇಕಾದರೂ ಭರಿಸುತ್ತೇನೆ. ಆದರೆ  ದೇಶಕ್ಕಾಗಿ ಕ್ರಿಕೆಟ್ ಆಡುವುದನ್ನು ಬಿಟ್ಟು ಜೀವಿಸುವುದಿಲ್ಲ ಎಂದು ಹೇಳಿದ್ದೆ".

ಇದಾದ ಬಳಿಕ ಕಮ್ ಬ್ಯಾಕ್ ಮಾಡಿದ್ದೆ ಮತ್ತು ಟೀಂ ಇಂಡಿಯಾದಲ್ಲಿ ಸ್ಥಾನ ಕೂಡ ಗಳಿಸಿದ್ದೆ. ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಾಕಷ್ಚು ಏಳು ಬೀಳುಗಳನ್ನು ಕಂಡಿದ್ದೇನೆ. ಆದರೆ ಎಂದಿಗೂ ನಾನು ಸೋಲು ಒಪ್ಪಿಕೊಂಡಿಲ್ಲ.  ಒಪ್ಪಿಕೊಳ್ಳುವುದೂ ಇಲ್ಲ. ಪ್ರಸ್ತುತ ಈಗಲೂ ನನ್ನ ಮುಂದೆ ಇದೇ ಪರಿಸ್ಥಿತಿ ಇರಬಹುದು. ಆದರೆ ಖಂಡಿತ ಈ ತಡೆಯನ್ನು ದಾಟಿ ಹೊರಬರುತ್ತೇನೆ. ನನಗಾಗಿ ಪ್ರಾರ್ಥಿಸಿದ ನನ್ನ ಎಲ್ಲ ಅಭಿಮಾನಿಗಳಿಗೆ ಇದನ್ನು ಹೇಳಬೇಕು ಎನಿಸಿತು.  ಹೀಗಾಗಿ ಇದನ್ನು ಬರೆದಿದ್ದೇನೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

SCROLL FOR NEXT