ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ಕೋಲ್ಕಕಾ ನೈಟ್ ರೈಡರ್ಸ್(ಕೆಕೆಆರ್) ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
2010ರಿಂದ ಪಾಕಿಸ್ತಾನದ ಮಾಜಿ ಬೌಲರ್ ವಾಸಿಂ ಅಕ್ರಂ ಕೆಕೆಆರ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೆಲ ವೈಯಕ್ತಿ ಕಾರಣದಿಂದ ಅಕ್ರಂ ಬೌಲಿಂಗ್ ಕೋಚ್ ಹುದ್ದೆಯಿಂದ ಹಿಂದೆ ಸರಿಸಿದ್ದು ಲಕ್ಷ್ಮೀಪತಿ ಬಾಲಾಜಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಲಕ್ಷ್ಮೀಪತಿ ಬಾಲಾಜಿ 2011 ರಿಂದ 2013ರ ಅವಧಿಯಲ್ಲಿ ಕೆಕೆಆರ್ ತಂಡದ ಪ್ರಮುಖ ಬೌಲರ್ ಆಗಿದ್ದರು. ಐಪಿಎಲ್ 7 ಆವೃತ್ತಿಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಟೀಂ ಇಂಡಿಯಾ ಪರ 8 ಟೆಸ್ಟ್ ಮತ್ತು 30 ಏಕದಿನ ಪಂದ್ಯವಾಡಿರುವ ಬಾಲಾಜಿ ಟೆಸ್ಟ್ ನಲ್ಲಿ 27 ಮತ್ತು ಏಕದಿನ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.