ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಏಕದಿನ ಸರಣಿಯನ್ನು ಗೆದ್ದು ಬಿಗುತ್ತಿರುವ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆಲ್ಲುವ ತವಕದಲ್ಲಿದೆ.
ಟಿ20 ಸರಣಿಯ ಮೂರು ಪಂದ್ಯಗಳ ಪೈಕಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದಿವೆ. ಇದರೊಂದಿಗೆ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದ ಮೇಲಿದೆ ಎಲ್ಲರ ಚಿತ್ತ. ವಿರಾಟ್ ಕೊಹ್ಲಿ ಟೀಂ ಇಂಡಿಯಾ ತಂಡದ ಮೂರು ಮಾದರಿಗೂ ನಾಯಕನಾದ ಮೇಲೆ ಏಕದಿನ ಸರಣಿಯನ್ನು ಗೆದ್ದಿದೆ. ನಾಳೆ ನಡೆಯುವ ನಿರ್ಣಯಕ ಪಂದ್ಯದಲ್ಲಿ ಭಾರತ ಗೆದ್ದರೆ ವಿರಾಟ್ ಕೊಹ್ಲಿಯ ಸಮರ್ಥ ನಾಯಕತ್ವ ಜಗತ್ತಿಗೆ ಗೊತ್ತಾಗಲಿದೆ.
ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಬಳಿಕ ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಕೊನೆಯ ಮ್ಯಾಜಿಕ್ ಓವರ್ ನಿಂದಾಗಿ ಭಾರತ ಅಮೋಘ ಜಯ ಸಾಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics