ಕ್ರಿಕೆಟ್

ಚಾಂಪಿಯನ್ ಟ್ರೋಫಿ ಗೆದ್ದ ಪಾಕ್ ಕ್ರಿಕೆಟ್‌ನಲ್ಲಿ ಬಹುಮಾನ ಹಣಕ್ಕಾಗಿ ತಿಕ್ಕಾಟ!

Vishwanath S
ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಪಾಕಿಸ್ತಾನ ಕ್ರಿಕೆಟ್ ವಲಯದಲ್ಲಿ ಬಹುಮಾನದ ಹಣದ ವಿಷಯವಾಗಿ ಅಸಮಾಧಾನ ಭುಗಿಲೆದ್ದಿದೆ. 
ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ ಪಾಕಿಸ್ತಾನ ಸರ್ಕಾರ ಸಹ ಬಹುಮಾನವನ್ನು ಘೋಷಿಸಿತ್ತು. ಇದೇ ವೇಳೆ ಪಾಕ್ ಕ್ರಿಕೆಟ್ ತಂಡದ ಆಯ್ಕೆ ಮಂಡಳಿ ಅಧ್ಯಕ್ಷ ಇಂಜಮಾಮ್ ಉಲ್ ಹಕ್ ಗೆ ಪಾಕ್ ಸರ್ಕಾರ 1 ಕೋಟಿ ಬಹುಮಾ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. 
ಪಾಕ್ ಸರ್ಕಾರ ಕ್ರಿಕೆಟ್ ತಂಡದ ಎಲ್ಲಾ ಸದಸ್ಯರಿಗೆ, ತಂಡದ ಕೋಚ್ ಹಾಗೂ ಸಹಾಯಕ ಕೋಚ್ ಹುದ್ದೆಯಲ್ಲಿರುವವರಿಗೆ ಬಹುಮಾನ ಘೋಷಿಸಿತ್ತು. ಇವರಲ್ಲಿ ಕೋಚ್ ಹಾಗೂ ಸಹಾಯಕ ಕೋಚ್ ಗಳಿಗೆ ನೀಡಿರುವ ಬಹುಮಾನದ ಮೊತ್ತಕ್ಕಿಂತ ಆಯ್ಕೆ ಮಂಡಳಿ ಸದಸ್ಯರಿಗೆ ಹೆಚ್ಚು ಮೊತ್ತ ನೀಡಿರುವ ಆಕ್ರೋಶಕ್ಕೆ ಕಾರಣವಾಗಿದೆ. 
ಪಾಕ್ ಸರ್ಕಾರ ತಂಡದ ಕೋಚ್ ಗಳಿಗೆ 50 ಲಕ್ಷ ಬಹುಮಾನ ಘೋಷಿಸಿದ್ದರೆ ಆಯ್ಕೆ ಮಂಡಳಿ ಅಧ್ಯಕ್ಷರಾದ ಇಂಜಮಾಮ್ ಉಲ್ ಹಕ್ ಹಾಗೂ ಇತರ ಸದಸ್ಯರಿಗೆ ತಲಾ ಒಂದು ಕೋಟಿ ಬಹುಮಾನ ಘೋಷಿಸಿತ್ತು. 
SCROLL FOR NEXT