ನ್ಯೂಯಾರ್ಕ್: ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಾಲಿ ಮೂಡ್ ನಲ್ಲಿದ್ದಾರೆ.
ಬಾಲಿವುಡ್ ನಟಿ, ಗೆಳತಿ ಅನುಷ್ಕಾ ಶರ್ಮಾ ಜತೆ ಅಮೆರಿಕದ ನ್ಯೂಯಾರ್ಕ್ ನಲ್ಲಿ ಸುತ್ತುತ್ತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಪ್ರೇಮಿಗಳಾಗಿದ್ದು ಇಬ್ಬರು ಜತೆ ಜತೆಯಾಗಿ ಸುತ್ತುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಈ ಜೋಡಿ ಆಸ್ಟ್ರೇಲಿಯಾ ಅಮೆರಿಕ ಸೇರಿದಂತೆ ಹಲವು ಕಡೆ ಸುತ್ತಾಡಿ ಗಮನ ಸೆಳೆದಿತ್ತು.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ಇನ್ನು ಏಕೈಕ ಟಿ20 ಸರಣಿಯಲ್ಲಿ ಭಾರತದ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿತ್ತು.
ಜುಲೈ 26ರಿಂದ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು ಸದ್ಯ ಟೀಂ ಇಂಡಿಯಾ ಆಟಗಾರರು ರಜಾ ಮೂಡ್ ನಲ್ಲಿದ್ದಾರೆ.