ಕ್ರಿಕೆಟ್

ಗಾಲೆ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ 291 ರನ್ ಗಳಿಗೆ ಶ್ರೀಲಂಕಾ ಆಲೌಟ್, ಭಾರತಕ್ಕೆ 309 ರನ್ ಗಳ ಮುನ್ನಡೆ!

Srinivasamurthy VN

ಗಾಲೆ: ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 291 ರನ್ ಗಳಿಗೆ ಸರ್ವಪತನ ಕಂಡಿದ್ದು, ಭಾರತ 309 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

ಭಾರತ ನೀಡಿದ್ದ 600 ರನ್ ಗಳ ಬೃಹತ್ ರನ್ ಗಳಿಗೆ ಎದುರಾಗಿ ಶ್ರೀಲಂಕಾ ತಂಡ ಕೇವಲ 291 ರನ್ ಗಳಿಗೆ ಆಲೌಟ್ ಆಗಿದ್ದು, ಆ ಮೂಲಕ ಭಾರತಕ್ಕೆ 309 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ನೀಡಿದೆ. ನಿನ್ನೆ 2ನೇ ದಿನದಾಟದಂ  ಅಂತ್ಯಕ್ಕೆ 154 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡ ಇಂದು 291 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ನಿನ್ನೆ ದಿನದಾಟದ ಅಂತ್ಯಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಪೆರೇರಾ ಮತ್ತು ಮ್ಯಾಥ್ಯೂಸ್ ಜೋಡಿ ಇಂದು ಕೇವಲ 50 ರನ್ ಸೇರಿಸುವಷ್ಟರಲ್ಲೇ ಬೇರ್ಪಟ್ಟಿತು. 83 ರನ್ ಗಳಿಸಿ ಶತಕದತ್ತ ದಾಪುಗಾಲಿರಿಸಿದ್ದ ಮ್ಯಾಥ್ಯೂಸ್ ರನ್ನು ರವೀಂದ್ರ  ಜಡೇಜಾ ಔಟ್ ಮಾಡಿದರು. ಮ್ಯಾಥ್ಯೂಸ್ ಔಟ್ ಆಗುವುದರೊಂದಿಗೆ ಶ್ರೀಲಂಕಾ ಆಟಗಾರರ ಪೆವಿಲಿಯನ್ ಪರೇಡ್ ಕೂಡ ಆರಂಭವಾಯಿತು. ಡಿಕ್ ವೆಲ್ಲಾ (8 ರನ್), ರಂಗನಾ ಹೆರಾತ್ (9 ರನ್), ನುವಾನ್ ಪ್ರದೀಪ್ (10 ರನ್),  ಲಾಹಿರು ಕುಮಾರ (2 ರನ್) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಮತ್ತೊಂದು ತುದಿಯಲ್ಲಿದ್ದ ಪೆರಾರಾ ಮಾತ್ರ ಅಜೇಯ 92 ರನ ಗಳಿಸಿದ್ದರು. ಅವರಿಗೆ ಉಳಿದ ಬ್ಯಾಟ್ಸಮನ್ ಗಳಿಂದ ಉತ್ತಮ ಸಾಥ್  ದೊರೆಯಲಿಲ್ಲ. ಹೀಗಾಗಿ ಶ್ರೀಲಂಕಾ ತಂಡ 291 ರನ್ ಗಳಿಗೆ ಸರ್ವ ಪತನ ಕಂಡಿತು.

ಆ ಮೂಲಕ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 309 ರನ್ ಗಳ ಬೃಹತ್ ಮುನ್ನಡೆ ಪಡೆಯಿತು, ಇನ್ನು ಭಾರತದ ಪರ ಜಡೇಜಾ 3, ಶಮಿ 2 ವಿಕೆಟ್ ಪಡೆದರೆ, ಉಮೇಶ್ ಯಾದವ್, ಆರ್ ಆಶ್ವಿನ್, ಹಾರ್ದಿಕ್ ಪಾಂಡ್ಯಾ ತಲಾ 1 ವಿಕೆಟ್  ಪಡೆದರು.

SCROLL FOR NEXT