ನವದೆಹಲಿ: ಪಾಕಿಸ್ತಾನದ ವಿರುದ್ಧ ಆಡಿದ ಇನ್ನಿಂಗ್ಸ್ ನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಸಮರ್ಪಿಸುತ್ತೇನೆಂದು ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್'ಮನ್ ಯುವರಾಜ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಮಿನಿ ವಿಶ್ವಕಪ್ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 124 ರನ್ ಗಳ ಅಂತರದಿಂದ (ಡಕ್ವರ್ಥ್ ಲೂಯಿಸ್ ನಿಯಮದಡಿ) ಬಗ್ಗು ಬಡಿದು ಭರ್ಜರಿ ನಿನ್ನೆಯಷ್ಟೇ ಗೆಲುವು ಸಾಧಿಸಿತ್ತು. ಪಾಕಿಸ್ತಾನದ ವಿರುದ್ಧ ಆಡಿದ ಯುವರಾಜ್ ಸಿಂಗ್ ಅವರು ಅದ್ಭುತವಾಗಿ ಆಡಿದ್ದರು.
ಪಾಕಿಸ್ತಾನ ವಿರುದ್ಧ ಭಾರತ ಗೆಲವು ಸಾಧಿಸಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಚರ್ ನಲ್ಲಿ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಅವರು, ನನ್ನ ಈ ಇನ್ನಿಂಗ್ಸ್ ಕ್ಯಾನ್ಸರ್ ಪೀಡಿತರಿಗೆ ಸಮರ್ಪಿಸುತ್ತೇನೆ. ಎಲ್ಲಾ ಹೀರೋಗಳಿಗೂ ಮತ್ತು ಕ್ಯಾನ್ಸರ್ ರೋಗದಿಂದ ಬದುಕುಳಿದವರಿಗೆ ಸಮರ್ಪಿಸುತ್ತೇನೆಂದು ಹೇಳಿದ್ದಾರೆ.
ಆಲ್ಲದೆ, ಲಂಡನ್ ನಲ್ಲಿ ಉಗ್ರರು ನಿನ್ನೆ ನಡೆಸಿದ್ದ ಉಗ್ರರ ದಾಳಿಗೆ ಸಂತಾಪ ಸೂಚಿಸಿರುವ ಅವರು ಉಗ್ರರ ದಾಳಿಗೆ ಒಳಗಾವದರಿಗಾಗಿ ಪ್ರಾರ್ಥನೆ ಮಾಡುತ್ತೇನೆಂದು ತಿಳಿಸಿದ್ದಾರೆ.