ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.
ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಅಬ್ಬರ ಎದ್ದು ಕಾಣುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಕೊನೆಯ ನಾಲ್ಕು ಓವರ್ ಗಳಲ್ಲಿ ಭರ್ಜರಿ 72 ರನ್ ಗಳ ದಾಖಲೆ ಮೊತ್ತವನ್ನು ಸಿಡಿಸಿದ್ದಾರೆ.
ಇನ್ನಿಂಗ್ಸ್ ನ 22ರಿಂದ 35ನೇ ಓವರ್ ವರೆಗಿನ 14 ಓವರ್ ಗಳಲ್ಲಿ ಕೇವಲ 55 ರನ್ ಸಿಡಿಸಿದ್ದ ಟೀಂ ಇಂಡಿಯಾ ಕೊನೆಯ ಓವರ್ ನಲ್ಲಿ ಅಬ್ಬರಿಸಿದೆ. 45ನೇ ಓವರ್ ನಲ್ಲಿ 17 ರನ್, 46ನೇ ಓವರ್ ನಲ್ಲಿ 21 ರನ್, 47ನೇ ಓವರ್ ನಲ್ಲಿ 11 ಹಾಗೂ ಅಂತಿಮ ಓವರ್ ನಲ್ಲಿ ಭರ್ಜರಿ 23 ರನ್ ಸಿಡಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತದಲ್ಲಿ ನಡೆದ ಐಪಿಎಲ್ ನಲ್ಲಿ ಟೀಂ ಇಂಡಿಯಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು. ಇದೇ ಪ್ರದರ್ಶನವನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆಸಿದ್ದಾರೆ.
ಇನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಭರ್ಜರಿ 324 ರನ್ ಗಳನ್ನು ಸಿಡಿಸಿದ್ದು 240 ಅಂತರದಿಂದ ಜಯಭೇರಿ ಬಾರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics