ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಬಾಹುಬಲಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಕಾಮೆಂಟ್ರಿ ಬಾಕ್ಸ್ ನಲ್ಲಿದ್ದ ಸೆಹ್ವಾಗ್ ಧೋನಿಯನ್ನು ರಾಜಮೌಳಿ ನಿರ್ದೇಶನದ ಬಾಹುಬಲಿ ಪಾತ್ರಕ್ಕೆ ಹೋಲಿಸಿದ್ದಾರೆ.
ಧೋನಿ ಶ್ರೀಲಂಕಾ ವಿರುದ್ಧ 52 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸೇರಿದಂತೆ 63 ರನ್ ಬಾರಿಸಿದ್ದರು. ಈ ಸಂದರ್ಭದಲ್ಲಿ ಸೆಹ್ವಾಗ್ ಟ್ವೀಟರ್ ನಲ್ಲಿ ಧೋನಿ ಬಾಹುಬಲಿ ಎಂದು ಪ್ರಕಟಿಸಿದ್ದರು. ತಕ್ಷಣ ಇದಕ್ಕೆ ಅಭಿಮಾನಿಗಳಿಂದ ಸಾವಿರಾರು ಲೈಕ್ಸ್ ಕಾಮೆಂಟ್ಸ್ ಮಾಡಿದ್ದರು.