ರಶೀದ್ ಲತೀಫ್-ವೀರೇಂದ್ರ ಸೆಹ್ವಾಗ್
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಟೀಂ ಇಂಡಿಯಾ ವಿರುದ್ಧದ ಹೀನಾಯ ಸೋಲಿನ ಬಳಿಕ ಪಾಕಿಸ್ತಾನ ಟೀಕೆಗಳಿಗೆ ಗುರಿಯಾಗಿತ್ತು. ಇನ್ನು ಟೀಂ ಇಂಡಿಯಾ ಪರ ಶುಭಾಶಯದ ಮಾತುಗಳು ಕೇಳಿಬಂದಿತ್ತು. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ತಂಡವನ್ನು ಅಭಿನಂದಿಸುವುದರ ಜತೆಗೆ ಪಾಕಿಸ್ತಾನ ತಂಡದ ಕಾಲೆಳೆದಿದ್ದರು.
ನಂತರ ಭಾರತ ತಂಡ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿದ್ದನ್ನೇ ಗುರಿಯಾಗಿಸಿಕೊಂಡು ಪಾಕ್ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ 15 ನಿಮಿಷದ ವಿಡಿಯೋ ಮೂಲಕ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ರನ್ನು ಕಾಲೆಳೆದಿದ್ದಾರೆ. ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಸೆಹ್ವಾಗ್ ಅರ್ಥವಿಲ್ಲದ ಮಾತಿಗಿಂತ ಅರ್ಥಪೂರ್ಣ ಮೌನವೇ ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.
ರಶೀದ್ ಲತೀಫ್ ತಮ್ಮ ವಿಡಿಯೋದಲ್ಲಿ ಪಾಕಿಸ್ತಾನ ತಂಡವನ್ನು ಅಭಿನಂದಿಸುವುದರ ಜತೆಗೆ ಭಾರತ ತಂಡವನ್ನು ಕೆಳಮಟ್ಟದಲ್ಲಿ ಬಿಂಬಿಸಿದ್ದಾರೆ. ಇನ್ನು ಸೆಹ್ವಾಗ್ ನಮ್ಮನ್ನು ಗುರಿಯಾಗಿಸಿದರೆ ಯಾವುದೇ ತೊಂದರೆ ಇಲ್ಲ, ಆದರೆ ದೇಶವನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ರವಿಶಾಸ್ತ್ರಿ, ಅಜಯ್ ಜಡೇಜಾರನ್ನು ನಾನು ಗೌರವಿಸುತ್ತೇನೆ ಆದರೆ ನೀವು ಎಲ್ಲಿಂದ ಬಂದಿದ್ದೀರಿ ಎಂಬುದೇ ನನಗೆ ಗೊತ್ತಿಲ್ಲ ಎಂದು ಸೆಹ್ವಾಗ್ ಅವರ ಕಾಲೆಳೆದಿದ್ದರು.