ಸಂಗ್ರಹ ಚಿತ್ರ 
ಕ್ರಿಕೆಟ್

ಓರ್ವ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳಲು ಒಗ್ಗೂಡಿದ ಇಂಡೋ-ಪಾಕ್ ಅಭಿಮಾನಿಗಳು!

ಉಭಯ ದೇಶಗಳ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಒಂದಾಗಿದ್ದು. ಭಾರತ ತಂಡವನ್ನು ಟೀಕಿಸಿದ್ದ ಓರ್ವ ವ್ಯಕ್ತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ: ಉಭಯ ದೇಶಗಳ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಒಂದಾಗಿದ್ದು. ಭಾರತ ತಂಡವನ್ನು ಟೀಕಿಸಿದ್ದ ಓರ್ವ ವ್ಯಕ್ತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಉಗ್ರ ನಿಗ್ರಹ ಸೇರಿದಂತೆ ಯಾವುದೇ ರೀತಿಯ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನ ಒಗ್ಗೂಡುವುದಿಲ್ಲ ಎಂಬ ಮಾತೊಂತಿದೆ. ಅದು ನಿಜವೇ ಆದರೂ ಇತಿಹಾಸದಲ್ಲೇ ಮೊದಲು ಎಂಬಂತೆ ಭಾರತ ಮತ್ತು ಪಾಕಿಸ್ತಾನ ದೇಶಗಳು  ಒಂದು ವಿಚಾರಕ್ಕೆ ಒಗ್ಗೂಡಿವೆ. ಗೊಂದಲ ಬೇಡ...ಸರ್ಕಾರಗಳಲ್ಲ..ಬದಲಿಗೆ ಇಂಡೋ ಪಾಕ್ ಕ್ರಿಕೆಟ್ ಅಭಿಮಾನಿಗಳು ಇದೀಗ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಒಗ್ಗೂಡಿದ್ದಾರೆ. ಕ್ರೀಡಾಂಗಣದಲ್ಲಿ ಯಾವುದೇ ರೆಸ್ಲಿಂಗ್ ಪಂದ್ಯಕ್ಕೆ ಕಡಿಮೆ ಇಲ್ಲದಂತೆ ಜಗ್ಗಾಡುವ ಅಭಿಮಾನಿಗಳು ಇದೀಗ ಇಲ್ಲೊಂದು ವಿಚಾರಕ್ಕೆ ಒಗ್ಗೂಡಿದ್ದು, ಓರ್ವ ವ್ಯಕ್ತಿಯನ್ನು ಒಗ್ಗೂಡಿ ಥಳಿಸಬೇಕು ಎಂದುಕೊಂಡಿದ್ದಾರೆ.

ಇಷ್ಟಕ್ಕೂ ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಆ ಯುಗ"ಪುರುಷ" ಯಾರು ಗೊತ್ತೇ ಅದೇ.. ಈ ಹಿಂದೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ರನ್ನು ವ್ಯಂಗ್ಯ ಮಾಡಿದ್ದ ದಿ ಗ್ರೇಟ್ ಕಮಾಲ್  ಆರ್ ಖಾನ್.. ಹೌದು ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮನಸೋ ಇಚ್ಛೆ ನಿಂದಿಸಿದ್ದ ಬಿಗ್ ಬಾಸ್ ಸ್ಪರ್ಧಿ ಕಮಾಲ್ ಆರ್ ಖಾನ್ ನನ್ನು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಥಳಿಸಬೇಕು ಎಂದು ಕೊಂಡಿದ್ದಾರಂತೆ.

ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಕುರಿತಂತೆ ಬಾಯಿಗೆ ಬಂದಂತೆ ಟ್ವೀಟ್ ಮಾಡಿದ್ದ ಕಮಾಲ್ ಆರ್ ಖಾನ್ ಕೇವಲ ಭಾರತೀಯ ಅಭಿಮಾನಿಗಳು ಮಾತ್ರವಲ್ಲ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.  ವಿರಾಟ್ ಕೊಹ್ಲಿ ಕುರಿತಂತೆ ಕಮಾಲ್ ಆರ್ ಖಾನ್ ಟ್ವೀಟ್ ಗೆ ಭಾರಿ ಪ್ರಮಾಣದಲ್ಲಿ ರೀ ಟ್ವೀಟ್ ಮಾಡಿರುವ ಅಭಿಮಾನಿಗಳು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತಕ್ಕೆ ಕೊಹ್ಲಿ ಗೌರವವಾದರೆ, ಈ ಕಮಾಲ್ ಆರ್  ಖಾನ್ ರಂತಹವು ಕಪ್ಪು ಚುಕ್ಕೆಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಭಿಮಾನಿಗಳ ಕೆಲ ರಸವತ್ತಾದ ಟ್ವೀಟ್ ಗಳು ಇಲ್ಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಕಾಂಗ್ರೆಸ್‌ 'ಪ್ರಚೋದನಕಾರಿ' ಹೇಳಿಕೆ; ಭಾರತೀಯರ ಸುರಕ್ಷತೆಗೆ ಅಪಾಯ: ಪ್ರಧಾನಿ ಮೋದಿ

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ಜನರು ಗ್ಯಾಸ್‌ಗಾಗಿ ಕ್ಯೂ ನಿಂತರೆ; ರಾಜ್ಯ ಶಾಸಕರು RCB vs CSK ಪಂದ್ಯದ ಉಚಿತ IPL​ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತ್ರು: ಎಲ್ಲರಿಗೂ ಸಿಕ್ತು 3 ಟಿಕೆಟ್!

IPL 2026: ಶತಕದ ಅಂಚಿನಲ್ಲಿ ಎಡವಿದ ರಿಜ್ವಿ; ಡೆಲ್ಲಿ ಕ್ಯಾಪಿಟಲ್ಸ್ ಸತತ 2ನೇ ಗೆಲುವು; DC ಮುಂದೆ ಮಂಡಿಯೂರಿದ ಮುಂಬೈ!

ತಮಿಳುನಾಡಿನಲ್ಲಿ ಅಧಿಕಾರ ಯಾರಿಗೆ? ಡಿಎಂಕೆ, ಎನ್‌ಡಿಎ ಅಥವಾ ಟಿವಿಕೆ? ಸಮೀಕ್ಷೆಗಳಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ!

SCROLL FOR NEXT