ಕ್ರಿಕೆಟ್

ತವರಿನ ಮಾಧ್ಯಮಗಳಿಂದ ಶ್ರೀಲಂಕಾ ತಂಡಕ್ಕೆ ಶ್ರದ್ಧಾಂಜಲಿ!

Vishwanath S
ಕೊಲಂಬೊ: ಪ್ರವಾಸಿ ಬಾಂಗ್ಲಾದೇಶ ತಂಡದ ವಿರುದ್ಧದ ಕಳೆದ ಟೆಸ್ಟ್ ಸರಣಿಯ 2ನೇ ಹಾಗೂ ಅಂತಿಮ ಪಂದ್ಯವನ್ನು ಸೋತಿರುವುದಕ್ಕೆ ಅಲ್ಲಿನ ಮಾಧ್ಯಮಗಳು ಶ್ರೀಲಂಕಾ ಕ್ರಿಕೆಟ್ ನಿಧನ ಎಂದು ಟೀಕಿಸಿವೆ. 
ಕೊಲಂಬೊ ಟೆಸ್ಟ್ ನಲ್ಲಿ ಬಾಂಗ್ಲಾ ವಿರುದ್ಧ ಶ್ರೀಲಂಕಾ ತಂಡ 4 ವಿಕೆಟ್ ಗಳಿಂದ ಸೋತಿದ್ದು ಅಲ್ಲಿನ ಮಾಧ್ಯಮಗಳನ್ನು ಕೆರಳಿಸಿದೆ. ಇದಕ್ಕೆ ದಿನಪತ್ರಿಕೆಗಳಲ್ಲಿ ಆರ್ಐಪಿ ಶ್ರೀಲಂಕಾ ಕ್ರಿಕೆಟ್ ಎಂಬ ಹಣೆಬರಹದೊಂದಿಗೆ ಮಾರ್ಚ್ 19ರಂದು ಶ್ರೀಲಂಕಾ ಕ್ರಿಕೆಟ್ ಸಾವನ್ನಪ್ಪಿದೆ. ಇದಕ್ಕೆ ಸ್ನೇಹಿತರು, ಪರಿಚಿತರೆಲ್ಲರೂ ಕಣ್ಣೀರು ಸುರಿಸಿದ್ದಾರೆ. ದೇಹವನ್ನು ದಹನ ಮಾಡಲಾಗಿದ್ದು ಬೂದಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿ ಮಾಡಿದೆ. 
ಬಾಂಗ್ಲಾದೇಶ ತಂಡಕ್ಕೆ ಸೋತಿರುವುದು ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ನ ಅತ್ಯಂತ ಕರಾಳ ಅವಧಿ, ಬಾಂಗ್ಲಾದೇಶದ ಗೆಲುವು ನಿಜಕ್ಕೂ ವಿಶೇಷ. ಟೆಸ್ಟ್ ತಂಡವಾಗಿ ಅವರು ಎಷ್ಟು ಸುಧಾರಣೆಗೊಂಡಿದ್ದೇವೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಶ್ರೀಲಂಕಾ ಈಗ ಬಾಂಗ್ಲಾದೇಶ, ಆಫ್ಗಾನಿಸ್ತಾನ, ಐರ್ಲೆಂಡ್ ನಂಥ ದುರ್ಬಲ ತಂಡಗಳನ್ನೇ ಸೋಲಿಸಲು ಪರದಾಡುತ್ತಿದೆ ಎಂದು ಲಂಕಾದ ಡೈಲಿ ನ್ಯೂಸ್ ಹೆಡ್ ಲೈನ್ ಪ್ರಕಟಿಸಿದೆ.
ಈ ಹಿಂದೆ ಕ್ರಿಕೆಟ್ ಜನಕ ಎಂದೇ ಕರೆಯಲ್ಪಡುವ ಇಂಗ್ಲೆಂಡ್ 135 ವರ್ಷಗಳ ಹಿಂದೆ ಆಸ್ಟ್ರೇಲಿಯಾ ತಂಡದ ವಿರುದ್ಧ ತವರಿನ ಟೆಸ್ಟ್ ನಲ್ಲಿ ಸೋತ ಆಘಾತಕ್ಕೆ ಇಂಗ್ಲೆಂಡ್ ಕ್ರಿಕೆಟ್ ಸಾವನ್ನಪ್ಪಿದೆ ಎಂದು ಅಲ್ಲಿನ ಮಾಧ್ಯಮಗಳು ಕಟುವಾಗಿ ವರದಿ ಮಾಡಿದ್ದವು. ನಂತರ ಇದೇ ಉಭಯ ದೇಶಗಳ ನಡುವಿನ ಆಶಸ್ ಎಂಬ ಪ್ರತಿಷ್ಠಿತ ಟೆಸ್ಟ್ ಸರಣಿಯ ಹುಟ್ಟಿಗೆ ಕಾರಣವಾಗಿತ್ತು. ಇದೀಗ ಶ್ರೀಲಂಕಾ ಕ್ರಿಕೆಟ್ ನಲ್ಲೂ ಇಂಥದ್ದೇ ಬೆಳವಣಿಗೆಗಳಾಗಿವೆ. 
SCROLL FOR NEXT