ಕ್ರಿಕೆಟ್

ಮುರಳಿ ವಿಜಯ್ ವಿರುದ್ಧ ಅಶ್ಲೀಲ ಶಬ್ಧ ಬಳಕೆ: ಕ್ಷಮೆಯಾಚಿಸಿದ ಸ್ಟೀವನ್ ಸ್ಮಿತ್

Manjula VN
ಧರ್ಮಶಾಲಾ: ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್ ಅವರನ್ನು ಅಶ್ಲೀಲ ಶಬ್ದದಲ್ಲಿ ನಿಂದಿಸಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರು ತಮ್ಮ ಹೇಳಿಕೆ ಕುರಿತಂತೆ ಮಂಗಳವಾರ ಕ್ಷಮೆಯಾಚಿಸಿದ್ದಾರೆ. 
ನಾಲ್ಕನೇ ಪಂದ್ಯ ಮುಗಿದ ಬಳಿಕ ತಮ್ಮ ವರ್ತನೆ ಕುರಿತಂತೆ ಮಾತನಾಡಿರುವ ಸ್ಮಿತ್ ಅವರು, ಸರಣಿ ಸಾಕಷ್ಟು ತೀವ್ರತೆಯನ್ನು ಪಡೆದುಕೊಂಡಿತ್ತು. ಈ ವೇಳೆ ನಾನು ನನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದೆ. ನನ್ನ ಹೇಳಿಕೆ ಕುರಿತಂತೆ ನಾನು ಕ್ಷಮೆಯಾಸುತ್ತೇನೆಂದು ಹೇಳಿದ್ದಾರೆ. 
ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಬಹುಬೇಗನೆ ವಿಕೆಟ್'ಗಳನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಒತ್ತಡಕ್ಕೆ ಸಿಲುಕಿತ್ತು. ಭಾರತದ ಆಟಗಾರ ಮುರಳಿ ವಿಜಯ್, ಆಸ್ಟ್ರೇಲಿಯಾದ ಹ್ಯಾಜಲ್'ವುಡ್ ಅವರ ಕ್ಯಾಚ್ ಹಿಡಿದ ಬಳಿಕ ಔಟ್ ಎಂದು ಅಂಪೈರ್ ಬಳಿ ಬಲವಾಗಿ ಮನವಿ ಮಾಡಿದ್ದರು. ಫೀಲ್ಡ್ ಅಂಬೈರ್ ಅವರು ಔಟ್ ಕೊಟ್ಟಿದ್ದರು. ಆಧರೆ, ಟಿವಿ ರೀಪ್ಲೆಯಲ್ಲಿ ಅದು ನಾಟ್ ಔಟ್ ಆಗಿತ್ತು. 
ಮೂರನೇ ಆಂಪೈರ್ ನಾಟ್ ಔಟ್ ಎಂದು ಮತ್ತೆ ತೀರ್ಪು ನೀಡಿದ್ದರು. ಈ ವೇಳೆ ಡ್ರೆಸಿಂಗ್ ರೂಮ್'ನಲ್ಲಿದ್ದ ಸ್ಟೀವನ್ ಸ್ಮಿತ್ ಅವರು ಮುರಳಿ ವಿಜಯ್ ಅವರನ್ನು ಕೆಟ್ಟ ಶಬದ್ದದಲ್ಲಿ ನಿಂದಿಸಿದ್ದರು. ಮುರಳಿ ವಿಜಯ್ ಅವರನ್ನು ಸ್ಮಿತ್ ಅವರು ನಿಂದಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಸ್ಮಿತ್ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ತೀಕೆಗಳು ವ್ಯಕ್ತವಾಗತೊಡಗಿದ್ದವು. 
SCROLL FOR NEXT