ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಎಲ್ಲ ಆಸ್ಟ್ರೇಲಿಯಾ ಕ್ರಿಕೆಟಿಗರ ಮೇಲೆ ನನಗೆ ಸಿಟ್ಟಿಲ್ಲ: ಕೊಹ್ಲಿ ಸ್ಪಷ್ಟನೆ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಬರೀ ವಿವಾದಗಳಿಂದಲೇ ತುಂಬಿ ಹೋಗಿತ್ತು. ಈ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ಬಳಿಕ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ...

ವಿರಾಟ್ ಕೊಹ್ಲಿ
Vishwanath S
Updated On : 31 Mar 2017, 2:44 am
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಬರೀ ವಿವಾದಗಳಿಂದಲೇ ತುಂಬಿ ಹೋಗಿತ್ತು. ಈ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ಬಳಿಕ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರನ್ನು ಇನ್ನೆಂದೂ ಸ್ನೇಹಿತರೆಂದು ಭಾವಿಸುವುದಿಲ್ಲ ಎಂದು ಹೇಳಿದ್ದು ಇದೀಗ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. 
ಧರ್ಮಶಾಲಾ ಟೆಸ್ಟ್ ಬಳಿಕ ಮಾತನಾಡಿದ್ದ ನನ್ನ ಹೇಳಿಕೆಯನ್ನು ಅಗತ್ಯಕ್ಕಿಂತ ಹೆಚ್ಚು ಎಳೆದಾಡಲಾಗಿದೆ. ಇಡೀ ಆಸ್ಟ್ರೇಲಿಯಾ ತಂಡಕ್ಕೆ ಅನ್ವಯವಾಗುವಂತೆ ನಾನು ಹಾಗೆ ಹೇಳಿಲ್ಲ. ಒಂದಿಬ್ಬರ ಕುರಿತಂತೆ ಮಾತ್ರ ಹಾಗೆ ಹೇಳಿದ್ದೇನೆ. ಆರ್ಸಿಬಿಯಲ್ಲಿ ನಾನು ಆಡಿರುವ ಕೆಲ ಆಸ್ಟ್ರೇಲಿಯಾ ಕ್ರಿಕೆಟಿಗರೊಂದಿಗಿನ ಸ್ನೇಹ ಸಂಬಂಧ ಹಾಗೆಯೇ ಮುಂದುವರೆಯಲಿದೆ ಎಂದು ಟ್ವೀಟ್ ನಲ್ಲಿ ಸ್ಪಷ್ಟನೇ ನೀಡಿದ್ದಾರೆ. 
ಧರ್ಮಶಾಲಾ ಟೆಸ್ಟ್ ಗೆಲುವಿನೊಂದಿಗೆ ಸರಣಿ ಗೆದ್ದ ಖುಷಿಯಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ ಆರಂಭದಲ್ಲಿ ನಾನು ಅವರನ್ನು ಸ್ನೇಹಿತರು ಎಂದು ಹೇಳಿದ್ದೆ. ನನ್ನ ಅಭಿಪ್ರಾಯ ಬದಲಾಗಿದೆ. ಸರಣಿ ಬಿಸಿಯಲ್ಲಿ ನಾನು ಹೇಳಿದ್ದು ತಪ್ಪೆಂದು ಈಗ ಸಾಬೀತಾಗಿದೆ. ಈ ರೀತಿ ಮತ್ತೆಂದೂ ನಾನು ಹೇಳುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement