ಕ್ರಿಕೆಟ್

ಡೆಲ್ಲಿ ಅಬ್ಬರಕ್ಕೆ ನಡುಗಿದ ಗುಜರಾತ್ ಲಯನ್ಸ್

Vishwanath S
ನವದೆಹಲಿ: ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್(97) ಮತ್ತು ಸಂಜು ಸ್ಯಾಮ್ಸನ್ 61 ರನ್ ಗಳ ಭರ್ಜರಿ ಬ್ಯಾಟಿಂಗ್ ನಿಂದಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದ್ದು ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. 209 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿಗೆ ಯುವ ಬ್ಯಾಟ್ಸ್ ಮನ್ ಗಳು ಸಾಥ್ ನೀಡಿದರು. ರಿಷಭ್-ಸ್ಯಾಮ್ಸನ್ ಸಿಕ್ಸರ್ ಸುರಿಮಳೆ ಯೊಂದಿಗೆ ಡೆಲ್ಲಿ ತಂಡ 17.3 ಓವರ್ ಗಳಲ್ಲಿ 3 ವಿಕೆಟ್ 214 ರನ್ ಪೇರಿಸಿ ಭರ್ಜರಿ ಚೇಸಿಂಗ್ ಸಾಧನೆ ಮಾಡಿತು. 
ಡೆಲ್ಲಿ ಐಪಿಎಲ್ ಇತಿಹಾಸದ 2ನೇ ಗರಿಷ್ಠ ಚೇಸಿಂಗ್ ದಾಖಲೆ ಬರೆಯಿತು. 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ನೀಡಿದ 215 ರನ್ ಸವಾಲನ್ನು ರಾಜಸ್ಥಾನ್ ರಾಯಲ್ಸ್ ತಂಡ ಬೆನ್ನಟ್ಟಿದ್ದು ಗರಿಷ್ಠ ಚೇಸಿಂಗ್ ಸಾಧನೆಯಾಗಿತ್ತು. 
SCROLL FOR NEXT