ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಒಂದೇ ಆವೃತ್ತಿಯಲ್ಲಿ ಇಷ್ಟೊಂದು ಸೋಲುಗಳನ್ನು ನಾನು ನೋಡಿರಲಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಹೀನಾಯ ಸೋಲಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಒಂದು ಆವೃತ್ತಿಯಲ್ಲಿ ಈ ಮಟ್ಟದ ಬ್ಯಾಟಿಂಗ್ ವೈಪಲ್ಯವನ್ನು ನೋಡಿಯೇ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ಏನೆಂಬುದು ನನಗೆ ಅರ್ಥವಾಗುತ್ತಿಲ್ಲ. ಪ್ರತಿ ಬಾರಿ ಸೋತಾಗಲು ಇಲ್ಲಿ ಬಂದು ನಿಂತು ಏನು ಮಾತನಾಡಬೇಕು ಎನ್ನುವುದು ಸಹ ನನಗೆ ತಿಳಿಯುತ್ತಿಲ್ಲ. ಕಳೆದ ಆವೃತ್ತಿಯಲ್ಲಿ ಹೇಗೆ ಸಿದ್ಧತೆ ನಡೆಸಿದ್ದೆವೋ, ಅದೇ ರೀತಿಯೇ ಈ ವರ್ಷವೂ ಅಭ್ಯಾಸ ನಡೆಸುತ್ತಿದ್ದೇವೆ. ಆದರೆ ಬ್ಯಾಟಿಂಗ್ ನಲ್ಲಿ ಯಾಕಿಷ್ಟು ವೈಫಲ್ಯ ಎದುರಾಗುತ್ತಿದೆ ಎಂದು ತಿಳಿಯುತ್ತಿಲ್ಲ ಎಂದರು.