ಸಂಗ್ರಹ ಚಿತ್ರ 
ಕ್ರಿಕೆಟ್

ಐಪಿಎಲ್ 2017ನಿಂದ ಬ್ರೆಂಡನ್ ಮೆಕ್ಕಲಮ್ ಹೊರಕ್ಕೆ!

ಗುಜರಾತ್ ಲಯನ್ಸ್ ತಂಡದ ಸ್ಟಾರ್ ಆಟಗಾರ ಬ್ರೆಂಡನ್ ಮೆಕ್ಕಲಮ್ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ: ಗುಜರಾತ್ ಲಯನ್ಸ್ ತಂಡದ ಸ್ಟಾರ್ ಆಟಗಾರ ಬ್ರೆಂಡನ್ ಮೆಕ್ಕಲಮ್ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದೆಹಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಆಟವಾಡುತ್ತಿದ್ದಾಗ ಮೆಕ್ಕಲಮ್ ಮೊಣಕಾಲಿಗೆ ಪೆಟ್ಟಾಗಿತ್ತು. ನೋವಿನ ನಡುವೆಯೂ ಮೆಕ್ಕಲಮ್ ಪಂದ್ಯ ಪೂರ್ಣಗೊಳಿಸಿದ್ದರಾದರೂ.  ಗಾಯ ಗಂಭೀರವಾದ್ದರಿಂದ ಸರಣಿಯ ಉಳಿದ ಪಂದ್ಯಗಳಿಂದ ಅವರು ದೂರ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಈಗಷ್ಟೇ ಮೆಕ್ಕಲಮ್ ತಂಡದಿಂದ ಹೊರಗುಳಿಯುತ್ತಿರುವ ವಿಚಾರ ಹೊರಗೆ ಬಂದಿದ್ದು, ಅವರ  ಬದಲಿಗೆ ಯಾವಆಟಗಾರನನ್ನು ಆಡಿಸಲಾಗುತ್ತದೆ ಎಂಬುದರ ಕುರಿತು ತಂಡದ ಆಡಳಿತ ಮಂಡಳಿ ಇನ್ನಷ್ಟೇ ಚರ್ಚೆ ನಡೆಸಬೇಕಿದೆ.

ಮೆಕ್ಕಲಮ್ ಹೊರತುಪಡಿಸಿ ಗುಜರಾತ್ ಲಯನ್ಸ್ ತಂಡದಲ್ಲಿ ಕೇವಲ ನಾಲ್ಕು ವಿದೇಶಿ ಆಟಗಾರರಿದ್ದು, ಡ್ವೇಯ್ನ್ ಸ್ಮಿತ್, ಜೇಮ್ಸ್ ಫಾಲ್ಕನರ್, ಆ್ಯರೋನ್ ಫಿಂಚ್ ಮತ್ತು ಚಿರಾಗ್ ಸುರಿ ತಂಡದಲ್ಲಿದ್ದಾರೆ. ಈಗಾಗಲೇ ಇದೇ ಗುಜರಾತ್  ತಂಡ ಗಾಯದ ಸಮಸ್ಯೆಯಿಂದಾಗಿ ಬ್ರಾವೋ ಮತ್ತು ಆ್ಯಂಡ್ರ್ಯೂ ಟೈ ಅವರನ್ನು ಕಳೆದುಕೊಂಡಿತ್ತು. ಇನ್ನು ಇಂಗ್ಲೆಂಡ್ ಪರವಾಗಿ ಅಡುವ ಸಲುವಾಗಿ ಜೇಸನ್ ರಾಯ್ ತಂಡ ತೊರೆದಿದ್ದರು. ಇದೀಗ ಮೆಕ್ಕಲಮ್ ಕೂಡ ಗಾಯದ  ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿಯುತ್ತಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ಸರಣಿಯಲ್ಲಿ 11 ಪಂದ್ಯಗಳನ್ನು ಆಡಿರುವ ಮೆಕ್ಕಲಮ್ 147 ಸ್ಟ್ರೈಕ್ ರೇಟ್ ನಲ್ಲಿ 319 ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT