ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಕಳಪೆ ಪ್ರದರ್ಶನದಿಂದ ಹತಾಶೆಗೊಂಡಿದ್ದ ಅಭಿಮಾನಿಗೆ ಕಿಚ್ಚ ಸುದೀಪ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಈ ಬಾರಿ ಐಪಿಎಲ್ ಗೆಲ್ಲುವ ಫೆವರೇಟ್ ತಂಡವಾಗಿದ್ದ ಆರ್ಸಿಬಿ ಕಳಪೆ ಪ್ರದರ್ಶನದಿಂದಾಗಿ ಐಪಿಎಲ್ ಅಂಕಪಟ್ಟಿಯಲ್ಲಿ 11 ಸೋಲುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇದರಿಂದಾಗಿ ಕೆರಳಿಸುವ ಆರ್ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ಪಡೆ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಯೊಬ್ಬ ಆರ್ಸಿಬಿ ತಂಡದ ಪ್ರದರ್ಶನ ನೋಡುತ್ತಿದ್ದರೆ ಸೆಲೆಬ್ರಿಟಿ ಸೂಪರ್ ಲೀಗ್(ಸಿಸಿಎಲ್) ಫ್ರಾಂಚೈಸಿ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡ ಸಹ ಕೊಹ್ಲಿ ಪಡೆಯನ್ನು ಸುಲಭವಾಗಿ ಸೋಲಿಸಬಹುದಾಗಿದೆ ಎಂದು ವ್ಯಂಗ್ಯವಾಡಿದ್ದರು.
ಹತಾಶ ಅಭಿಮಾನಿಗೆ ಪ್ರತಿಕ್ರಿಯಿಸಿರುವ ಸುದೀಪ್ ಇಂತಹ ಸಂದರ್ಭಗಳಲ್ಲಿ ನಾವು ನಮ್ಮ ಹೀರೋಗಳ ಬೆನ್ನಿಗೆ ನಿಲ್ಲಬೇಕು ಸ್ನೇಹಿತರೇ. ಚನ್ನಾಗಿ ಆಡುವ ವೇಳೆ ಅವರನ್ನು ಹೊಗಳಿ, ಕೆಟ್ಟ ಸಂದರ್ಭದಲ್ಲಿ ಅವರನ್ನು ತೆಗಳುವುದು ಮಾನವೀಯತೆಯಲ್ಲ ಎಂದು ಟ್ವೀಟ್ ಮಾಡುವ ಮೂಲಕ ಆರ್ಸಿಬಿ ಅಭಿಮಾನಿಗಳ ನಿರಾಸೆಯನ್ನು ತಣ್ಣಗಾಗಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics