ನವದೆಹಲಿ: ಜೂನ್ 1ರಿಂದ ಇಂಗ್ಲೆಂಡ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭಗೊಳ್ಳಲಿದ್ದು ನ್ಯೂಜಿಲೆಂಡ್ ತಂಡದ ಜೆರ್ಸಿಗೆ ಭಾರತದ ಪ್ರತಿಷ್ಠಿತ ಹಾಲು ಉತ್ಪಾದಕ ಸಂಸ್ಥೆ ಅಮುಲ್ ಪ್ರಯೋಜಕತ್ವ ವಹಿಸಿದೆ.
ಕ್ರೀಡಾಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಕ್ರೀಡಾ ಪಟುಗಳನ್ನು ಹುರಿದುಂಬಿಸಲು ಅಮುಲ್ ಹೆಚ್ಚು ಆಸಕ್ತಿ ಹೊಂದಿದೆ. ಈಗಾಗಲೇ ಐಸಿಸಿ ವಿಶ್ವಕಪ್, ಫಾರ್ಮುಲಾ 1, 2012 ಲಂಡನ್ ಒಲಿಂಪಿಕ್ಸ್ 2016ರ ರಿಯೋ ಒಪಿಂಲಿಕ್ಸ್ ನಲ್ಲಿ ಅಮುಲ್ ತನ್ನನ್ನು ತಾನು ತೊಡಗಿಸಿಕೊಂಡಿದೆ.
ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡದೊಂದಿಗೆ ಇಂತಹದೊಂದು ಒಪ್ಪಂದ ಮಾಡಿಕೊಳ್ಳುತ್ತಿದ್ದು ಕೀವಿಸ್ ತಂಡಕ್ಕೆ ಪ್ರಾಯೋಜಕತ್ವ ನೀಡುತ್ತಿರುವುದು ಸಂತಸದ ವಿಷಯ ಎಂದು ಅಮುಲ್ ನಿರ್ವಹಣಾ ನಿರ್ದೇಶಕ ಆರ್ ಎಸ್ ಸೋದಿ ತಿಳಿಸಿದ್ದಾರೆ.