ಕ್ರಿಕೆಟ್

ರಾಮಚಂದ್ರ ಗುಹಾ ರಾಜೀನಾಮೆ ಬಗ್ಗೆ ಸುಳಿವು ಇರಲಿಲ್ಲ: ಸಮಿತಿ ಸದಸ್ಯರು

ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರೂ ಕೂಡ ರಾಮಚಂದ್ರ ಗುಹಾ ಅವರು ನಿರ್ವಾಹಕರ ...

ನವದೆಹಲಿ: ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರೂ ಕೂಡ ರಾಮಚಂದ್ರ ಗುಹಾ ಅವರು ನಿರ್ವಾಹಕರ ಸಮಿತಿಗೆ ರಾಜೀನಾಮೆ ನೀಡಿದ್ದರೂ ಕೂಡ ಭಾರತೀಯ ಕೋಚ್ ಆಗುವ ಅನಿಲ್ ಕುಂಬ್ಳೆಯವರ ಭವಿಷ್ಯದ ಹಿನ್ನೆಲೆಯನ್ನು ಕೂಡ ಒಳಗೊಂಡಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಖಾಸಗಿ ಕಾರಣಗಳನ್ನು ನೀಡಿ ಏಕಾಏಕಿ ರಾಜೀನಾಮೆ ನೀಡಿರುವುದು ಭಾರತೀಯ ಕ್ರಿಕೆಟ್ ವಲಯವನ್ನು ದಿಗಿಲುಗೊಳಿಸಿದೆ. ಗುಹಾ ಅವರು ಸುಪ್ರೀಂ ಕೋರ್ಟ್ ಗೆ ಕಳೆದ ಶುಕ್ರವಾರ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತಾವು ಸಮಿತಿ ಮುಖ್ಯಸ್ಥ ವಿನೋದ್ ರೈ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರೂ ಕೂಡ ರಾಜೀನಾಮೆ ನೀಡುವ ಮುನ್ನ ನಿರ್ವಾಹಕರ ಸಮಿತಿಯ ತಮ್ಮ ಸಹೋದ್ಯೋಗಿಗಳ ಜೊತೆ ಚರ್ಚೆ ನಡೆಸಿರಲಿಲ್ಲ. 
ನನಗೆ ರಾಮಚಂದ್ರ ಗುಹಾ ರಾಜೀನಾಮೆ ನೀಡುವ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅವರು ಯಾವತ್ತೂ ನನ್ನೊಂದಿಗೆ ಏನನ್ನೂ ಹೇಳಿರಲಿಲ್ಲ. ನನಗೆ ಮಾಧ್ಯಮಗಳಿಂದಷ್ಟೇ ಗೊತ್ತಾಯಿತು ಎನ್ನುತ್ತಾರೆ ನಿರ್ವಾಹಕರ ಸಮಿತಿಯ ಸದಸ್ಯರೊಬ್ಬರು.
ಖ್ಯಾತ ಇತಿಹಾಸತಜ್ಞರಾಗಿರುವ  ರಾಮಚಂದ್ರ ಗುಹಾ ತಮ್ಮ ಶೈಕ್ಷಣಿಕ ಕಾರಣಗಳಿಂದಾಗಿ ಕ್ರಿಕೆಟ್ ನಿರ್ವಾಹಕ ಸಮಿತಿಯ ಸದಸ್ಯರಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಸುತ್ತ ಕೇಳಿಬರುತ್ತಿರುವ ಊಹಾಪೋಹಗಳಿಂದ ಅವರು ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ಅನಿಲ್ ಕುಂಬ್ಳೆ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿದೆ ಎಂದು ವರದಿಗಳು ಹೊರಹೊಮ್ಮಿದ ನಂತರ ಕುಂಬ್ಳೆಯ ವಿಷಯಗಳು ಊಹಾಪೋಹವಾಗಿದೆ. 
ಇನ್ನೊಂದೆಡೆ ಬಿಸಿಸಿಐನಿಂದ ಪ್ರತಿ ಕೆಲಸದ ದಿನಕ್ಕೆ ನಿರ್ವಾಹಕ ಸಮಿತಿ ಸದಸ್ಯರಿಗೆ 1 ಲಕ್ಷ ರೂಪಾಯಿ ವೇತನ ನೀಡಬೇಕೆಂದು ಇದ್ದರೂ ಕೂಡ ರಾಮಚಂದ್ರ ಗುಹಾ, ವಿನೋದ್ ರೈ ಅಥವಾ ವಿಕ್ರಮ್ ಲಿಮಯೆ ಅವರಿಗೆ ಇದುವರೆಗೆ ನಯಾಪೈಸೆ ಕೂಡ ನೀಡಿಲ್ಲ. 
ರಾಮಚಂದ್ರ ಗುಹಾ ಅವರಿಗೆ ಕ್ರೀಡಾ ಇತಿಹಾಸದ ಬಗ್ಗೆ ಒಳ್ಳೆಯ ಅನುಭವ ಇದೆ, ಶೈಕ್ಷಣಿಕವಾಗಿಯೂ ತಿಳಿದುಕೊಂಡಿದ್ದಾರೆ. ಆದರೆ ಕ್ರಿಕೆಟ್ ಆಡಳಿತವನ್ನು ನಡೆಸುವುದೆಂದರೆ ವಿಭಿನ್ನ ಅನುಭವ. ಅವರಿಗಿಂತ ಚೆನ್ನಾಗಿ ವಿನೋದ್ ರೈ ಮತ್ತು ವಿಕ್ರಮ್ ಲಿಮಯೆ ನಡೆಸುತ್ತಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಕುಂಬ್ಳೆ ಪರ ಗುಹಾ ಅವರ ಆತ್ಮೀಯತೆ ಕೂಡ ಅವರ ರಾಜೀನಾಮೆಗೆ ಇನ್ನೊಂದು ಕಾರಣವಿರಬಹುದು ಎನ್ನಲಾಗಿದೆ. ಬಿಸಿಸಿಐಯಲ್ಲಿ ವೇತನ ಪರಿಷ್ಕರಣೆಗೆ ರಾಮಚಂದ್ರ ಗುಹಾ ಕುಂಬ್ಳೆ ಪರವಾಗಿದ್ದರು ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT