ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನ ಹಾಗೂ ಮೈದಾನದ ಹೊರಗಡೆ ಎಷ್ಟು ಕೂಲ್ ಆಗಿರುತ್ತಾರೆ. ಅಂತಹ ಧೋನಿ ಆಫ್ ಫೀಲ್ಡ್ ನಲ್ಲಿ ಎಷ್ಟು ನಗೆ ಹುಕ್ಕಿಸುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಎಂಎಸ್ ಧೋನಿ ಮೈದಾನದಲ್ಲಿ ತಮ್ಮ ಕೌಶಲ್ಯದ ಮೂಲಕ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ಆಟಗಾರನಾಗಿರುವ ಅವರು ಆಫ್ ಫೀಲ್ಡ್ ಗೆ ಬಂದಾಗ ಅವರಲ್ಲಿನ ವಿನೋದ ಸ್ವಭಾವ ತೆರೆದುಕೊಳ್ಳುತ್ತದೆ.
ಕೇಶವಿನ್ಯಾಸಕಿ ಸಪ್ನ ಭವಾನಿ ಅವರು ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು ಅದರಲ್ಲಿ ಧೋನಿ ಕೆಲ ನೃತ್ಯದ ಭಂಗಿಗಳನ್ನು ಪ್ರದರ್ಶಿಸಿದ್ದಾರೆ. ಧೋನಿ ನೃತ್ಯವನ್ನು ಕಂಡ ಪತ್ನಿ ಸಾಕ್ಷಿ ಬಿದ್ದು ಬಿದ್ದು ನಕ್ಕಿದ್ದಾರೆ.