ಕ್ರಿಕೆಟ್

ರಣಜಿ ಕ್ರಿಕೆಟ್: ಕರ್ನಾಟಕ-ದೆಹಲಿ ಪಂದ್ಯ ಡ್ರಾ ನಲ್ಲಿ ಅಂತ್ಯ, ವಿನಯ್ ಕುಮಾರ್ ತಂಡಕ್ಕೆ ಇನಿಂಗ್ಸ್‌ ಮುನ್ನಡೆ

Raghavendra Adiga
ಬೆಂಗಳೂರು: ಆಲೂರಿನ ಕೆಎಸ್‌ ಸಿಎ ಕ್ರಿಕೆಟ್‌ ಗ್ರೌಂಡ್‌ ನಲ್ಲಿ ನಡೆದ ಕರ್ನಾಟಕ ದೆಹಲಿ ನಡುವಿನ ರಣಜಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದು ಪ್ರಸಕ್ತ ರಣಜಿ ಸರಣಿಯಲ್ಲಿ ವಿನಯ್‌ ಕುಮಾರ್‌ತಂದದ ಮೊದಲ ಡ್ರಾ ಪಂದ್ಯವಾಗಿತ್ತು. 'ಎ' ವಿಭಾಗದ ಮೊದಲ 3 ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದ ಕರ್ನಾಟಕಕ್ಕೆ ಸತತ 4ನೇ ಗೆಲುವಿಗೆ ಪ್ರಯತ್ನ ಕೈಗೂಡಲಿಲ್ಲ. . 348 ರನ್ ಗಳ ಇನ್ನಿಂಗ್ಸ್‌ ಮುನ್ನಡೆ ಗಳಿಸಿಯೂ ದೆಹಲಿಗೆ ಫಾಲೋ ಆನ್‌ ಹೇರಲು ರಾಜ್ಯ ತಂಡ ಮುಂದಾಗದಿರುವುದು ಇದಕ್ಕೆ ಕಾರನ ಎನ್ನಲಾಯಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಕಾರ ಕೆ.ಎಲ್‌. ರಾಹುಲ್‌ 92 ರನ್‌ (109 ಎಸೆತ, 9 ಬೌಂಡರಿ, 2 ಸಿಕ್ಸರ್‌). ಗಳಿಸಿದರೆ ಸಮರ್ಥ್ (47),  ಮಾಯಾಂಕ್‌ ಅಗರ್ವಾಲ್‌ ಔಟಾಗದೆ 23 ರನ್ ಗಳಿಸಿದ್ದರು. ಪಂದ್ಯದ ಕೊನೆಯಲ್ಲಿ ಕರ್ನಾಟಕ  3 ವಿಕೆಟಿಗೆ 235 ರನ್‌ ಕಲೆಹಾಕಿತ್ತು. ಕರುಣ್‌ ನಾಯರ್‌ 33 ಹಾಗೂ ಮನೀಷ್‌ ಪಾಂಡೆ 34 ರನ್‌ ಗಳೊಡನೆ ಅಜೇಯರಾಗಿ ಉಳಿದಿದ್ದರು.
4 ಪಂದ್ಯಗಳಿಂದ ಒಟ್ಟು 23 ಅಂಕ ಗಳಿಸಿದ ಕರ್ನಾಟಕ 'ಎ' ಗುಂಪಿನಲ್ಲಿ ಅಗ್ರಸ್ಥಾನ ಹೊಂದುವ ಮುಖೇನ ಕ್ವಾರ್ಟರ್ ಫೈನಲ್ಸ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ನ. 17ರಿಂದ ಉತ್ತರಪ್ರದೇಶ ವಿರುದ್ಧ ಆಡಲಿದ್ದು ಕಾನ್ಪುರದ ಗ್ರೀನ್‌ಪಾರ್ಕ್‌ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯಲಿದೆ. 
ಸ್ಕೋರ್ ವಿವರ
ಕರ್ನಾಟಕ-649 ಮತ್ತು 3 ವಿಕೆಟಿಗೆ 235 (ರಾಹುಲ್‌ 92, ಸಮರ್ಥ್ 47, ಪಾಂಡೆ ಔಟಾಗದೆ 34, ನಾಯರ್‌ ಔಟಾಗದೆ 33, ಅಗರ್ವಾಲ್‌ 23). ದಿಲ್ಲಿ-301 (ಗಂಭೀರ್‌ 144, ಶೋರಿ 64, ಪಂತ್‌ 41, ಮಿಥುನ್‌ 70ಕ್ಕೆ 5, ಬಿನ್ನಿ 39ಕ್ಕೆ 2). ಪಂದ್ಯಶ್ರೇಷ್ಠ: ಸ್ಟುವರ್ಟ್‌ ಬಿನ್ನಿ. ಅಂಕ: ಕರ್ನಾಟಕ-3, ದಿಲ್ಲಿ-1
SCROLL FOR NEXT