ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ತಂಡಕ್ಕಾಗಿ ಶತಕ ತ್ಯಾಗಕ್ಕೆ ಸಿದ್ಧವಿದ್ದ ವಿರಾಟ್ ಕೊಹ್ಲಿ

ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಆದರೆ ಇಲ್ಲಿ ವಿಶೇಷ ಸಂಗತಿಯೊಂದು ನಡೆದಿದ್ದು ತಂಡಕ್ಕಾಗಿ ಸೆಂಚೂರಿ ತ್ಯಾಗ ಮಾಡಲು...

ರವಿಶಾಸ್ತ್ರಿ-ವಿರಾಟ್ ಕೊಹ್ಲಿ
Vishwanath S
Updated On : 22 Nov 2017, 1:35 am
ಕೋಲ್ಕತ್ತಾ: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಆದರೆ ಇಲ್ಲಿ ವಿಶೇಷ ಸಂಗತಿಯೊಂದು ನಡೆದಿದ್ದು ತಂಡಕ್ಕಾಗಿ ಸೆಂಚುರಿ ತ್ಯಾಗ ಮಾಡಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿದ್ಧರಿದ್ದರು ಎಂದು ಹೇಳಲಾಗುತ್ತಿದೆ. 
ವೈಯಕ್ತಿಕ ದಾಖಲೆಗಳಿಗಿಂತ ತಂಡದ ಹಿತಾಸಕ್ತಿಗೆ ಆದ್ಯತೆ ನೀಡುವುದಾಗಿ ಅನೇಕ ಬಾರಿ ವಿರಾಟ್ ಕೊಹ್ಲಿ ಹೇಳಿದ್ದಾರೆ. ಅದನ್ನು ಕೋಲ್ಕತ್ತಾ ಟೆಸ್ಟ್ ನಲ್ಲಿ ಮತ್ತೊಮ್ಮೆ ನಿರೂಪಿಸಿದರು. 
ಕೋಲ್ಕತ್ತಾ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 50ನೇ ಶತಕ ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿ ಶತಕಕ್ಕೂ ಮುನ್ನ ಅಂದರೆ 97 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಬೇಕೆ ಎಂದು ಕೋಚ್ ರವಿಶಾಸ್ತ್ರಿಯನ್ನು ಕೇಳಿದರಂತೆ. ಆದರೆ ಅದಕ್ಕೆ ಶಾಸ್ತ್ರಿ ಬ್ಯಾಟಿಂಗ್ ಮುಂದುವರಿಸಿ ಶತಕ ಪೂರೈಸುವಂತೆ ಸೂಚಿಸಿದ್ದರು. ಜತೆಗೆ 12ನೇ ಆಟಗಾರನ ಬಳಿ ಸಂದೇಶ ಕಳುಹಿಸಿದರು. 

Advertisement

Advertisement

ರವಿಶಾಸ್ತ್ರಿ ಶತಕದ ಬಳಿಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವಂತೆ ಕೈ ಬೆರಳುಗಳ ಸನ್ನೆ ಮೂಲಕ ಸೂಚಿಸಿದ್ದರು ಎನ್ನಲಾಗುತ್ತಿದ್ದು ಇದೀಗ ಟ್ವೀಟರಿಗರು ಶಾಸ್ತ್ರಿ ಅವರ ಕೈ ಬೆರಳಿನ ಸನ್ನೆಗಳ ಗುಟ್ಟನ್ನು ಬಿಡಿಸಲು ಪ್ರಯತ್ನಿಸುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments