ಕ್ರಿಕೆಟ್

ಕೃಷಿ ಬಿಟ್ಟು, ಜಮೀನನ್ನು ಕ್ರಿಕೆಟ್ ಮೈದಾನವಾಗಿ ಪರಿವರ್ತಿಸಿ ದೆಹಲಿ ರೈತರಿಂದ ಲಕ್ಷ ಲಕ್ಷ ಸಂಪಾದನೆ!

Vishwanath S
ನವೆದಹಲಿ: ಕೃಷಿಯಿಂದ ಹಸನಾಗದ ಬದುಕನ್ನು ದೆಹಲಿ ರೈತರು ಕ್ರಿಕೆಟ್ ನಿಂದ ಹಸನು ಮಾಡಿಕೊಂಡಿದ್ದಾರೆ. 
ರಾಷ್ಟ್ರ ರಾಜಧಾನಿ ದೆಹಲಿಗೆ ಅಂಟಿಕೊಂಡಿರುವ ಹರ್ಯಾಣದ ಗುರ್ ಗಾಂವ್ ನಲ್ಲಿ ಐಟಿ ಉದ್ಯಮದ್ದೇ ಕಾರುಬಾರು. ಕೆಲ ವರ್ಷಗಳ ಹಿಂದೆ ಹಳ್ಳಿಯಾಗಿದ್ದ ಗುರ್ ಗಾಂವ್ ಇಂದು ಆಕಾಶದೆತ್ತರದ ಕಟ್ಟಡಗಳಿಂದ ತುಂಬಿ ಹೋಗಿದೆ. ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಗುರ್ ಗಾಂವ್ ಇಲ್ಲಿನ ರೈತರ ಬಾಳನ್ನೂ ಹಸನಾಗಿಸಿದೆ. 
ಗುರ್ ಗಾಂವ್ ನಲ್ಲಿ ಐಟಿ ಉದ್ಯಮ ದೊಡ್ಡದಾಗಿ ಬೆಳೆದಿರುವುದರಿಂದ ಇಲ್ಲಿನ ಐಟಿ ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಕ್ರಿಕೆಟ್ ಆಡಲು ಮೈದಾನವಿಲ್ಲ ಎನ್ನುವುದನ್ನು ತಿಳಿದುಕೊಂಡ ಅಲ್ಲಿನ ರೈತರು ಕೃಷಿಯನ್ನು ಬಿಟ್ಟು ತಮ್ಮ ಜಮೀನನ್ನು ಸುಸಜ್ಜಿತ ಕ್ರಿಕೆಟ್ ಮೈದಾನಗಳಾಗಿ ಬದಲಿಸಿ ಅದರಿಂದ ದುಡ್ಡು ಸಂಪಾದಿಸಿದ್ದಾರೆ. 
ದೆಹಲಿ ರೈತರು ತಮ್ಮ ಜಮೀನನ್ನು 2 ಲಕ್ಷ ರುಪಾಯಿ ಖರ್ಚು ಮಾಡಿ ಪಿಚ್ ಹಾಗೂ ಕ್ರಿಕೆಟ್ ಆಡಲು ಯೋಗ್ಯವಾದ ಔಟ್ ಫಿಲ್ಡ್ ತಯಾರಿಸಿದ್ದಾರೆ. ವಾರಾಂತ್ಯದಲ್ಲಿ ದಿನಕ್ಕೆ 15ರಿಂದ 20 ಸಾವಿರದವರೆಗೂ ಸಂಪಾದಿಸುತ್ತಿದ್ದಾರೆ. ಒಂದು ದಿನಕ್ಕೆ ಕನಿಷ್ಠ 3 ಟಿ20 ಪಂದ್ಯಗಳನ್ನು ನಡೆಸಬಹುದಾಗಿದ್ದು ಪ್ರತಿ ಪಂದ್ಯಕ್ಕೆ 3,500ರಿಂದ 5000 ಸಾವಿರದವರೆಗೆ ನಿಗಿದ ಪಡಿಸಿದ್ದಾರೆ. ಇದರಿಂದ ಇಲ್ಲಿನ ರೈತರ ಬದುಕು ಇದೀಗ ಹಸನಾಗಿದೆ. 
SCROLL FOR NEXT