ನವದೆಹಲಿ: ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವುದನ್ನು ರಾಜಕೀಯಗೊಳಿಸುವ ಮೂಲಕ "ದೇಶಭಕ್ತಿಯ ಅರ್ಥವನ್ನು ಕಿರಿದಾಗಿಸಬಾರದು" ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.
"ಕ್ರಿಕೆಟ್ ಅನ್ನು ಏಕೆ ರಾಜಕೀಯಗೊಳಿಸುತ್ತೀರಿ? ಕ್ರಿಕೆಟ್ ಆಡದೆ ಹೋದ ಮಾತ್ರಕ್ಕೆ ಭಯೋತ್ಪಾದನೆಯನ್ನು ತೊಡೆದುಹಾಕಲು ಸಾಧ್ಯವಿದೆಯೇ? ಎರಡು ರಾಷ್ಟ್ರಗಳು ಹತ್ತಿರವಾಗಲು ಕ್ರಿಕೆಟ್ ವೇದಿಕೆಯಾಗಿದೆ" ವಾರ್ಷಿಕ ಡಿಡಿಸಿಎ ಚಾಂಕ್ಲೀವ್ ಸಂವಾದದಲ್ಲಿ ಅವರು ಮಾತನಾಡಿದರು.
"ಇದು ಸರಿಯಲ್ಲ, ನಾನು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸರಣಿಯನ್ನು ಆಡುವಂತೆ ಹೇಳುತ್ತಿದ್ದೇನೆ, ಹೀಗೆಂದ ಮಾತ್ರಕ್ಕೆ ನಾನು ಭಾರತ ವಿರೋಧಿಯಾಗಿ ಮಾತನಾಡುತ್ತಿಲ್ಲ, ಕ್ರಿಕೆಟ್ ನ್ನು ರಾಜಕೀಯಗೊಳಿಸಿ ದೇಶಭಕ್ತಿಯ ಅರ್ಥವನ್ನು ಕುಗ್ಗಿಸುವುದು ಬೇಡ. "ಬಾರತ ತಂಡವು ರಾಷ್ಟ್ರೀಯ ಲಾಂಛನವನ್ನು (ಭಾರತ ಧ್ವಜ) ಧರಿಸುತ್ತದೆ, ಬಿಸಿಸಿಐ ಲಾಂಛ್ಹನವನ್ನಲ್ಲ.
ಆಟಗಾರರು ಬಿಸಿಸಿಐ ಗಾಗಿ ಆಟವಾಡುವುದಿಲ್ಲ. ಅವರು ಭಾರತಕ್ಕಾಗಿ ಆಡುತ್ತಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಸಹ ಬದ್ದ ವೈರಿಗಳು, ಅವುಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಪಾಕಿಸ್ತಾನ-ಬಾಂಗ್ಲಾದೇಶಗಳೂ ವೈರಿ ರಾಷ್ಟ್ರಗಳು. ಬೇಡಿ ಹೇಳಿದ್ದಾರೆ.
2012ರಲ್ಲಿ ಭಾರತದಲ್ಲಿ ನಡೆದಿದ್ದ ಪಾಕಿಸ್ತಾನ-ಭಾರತ ನಡುವಿನ ಕ್ರಿಕೆಟ್ ಪಂದ್ಯದ ಬಳಿಕ ಭಾರತ ಸರ್ಕಾರ ಈ ಎರಡು ರಾಷ್ಟ್ರಗಳ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಅನುಮತಿ ನೀಡಿರಲಿಲ್ಲ.