ಕರಾಚಿ: ಚುಟುಕು ಕ್ರಿಕೆಟ್ ನಲ್ಲಿ ಅಬ್ಬರದ ಬ್ಯಾಟ್ಸ್ ಮನ್ ಗಳಿಗೆ ಬಹು ಬೇಡಿಕೆ ಇರುತ್ತದೆ. ಅಂತಹದರಲ್ಲಿ ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಯ್ಲ್, ಕಿರಾನ್ ಪೊಲ್ಲಾರ್ಡ್ ಮತ್ತು ಶ್ರೀಲಂಕಾದ ಆಟಗಾರ ಕುಮಾರ್ ಸಂಗಾಕ್ಕರರನ್ನು ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ಫ್ರಾಂಚೈಸಿಗಳು ತಂಡದಿಂದ ಬಿಡುಗಡೆಗೊಳಿಸಿದ್ದಾರೆ.
ಪಿಎಸ್ಎಲ್ ನ ಫ್ರಾಂಚೈಸಿ ತಂಡ ಕರಾಚಿ ಕಿಂಗ್ಸ್ ನಲ್ಲಿ ಆಡುತ್ತಿದ್ದ ಕ್ರಿಸ್ ಗೇಯ್ಲ್, ಕಿರಾನ್ ಪೊಲ್ಲಾರ್ಡ್ ಹಾಗೂ ತಂಡದ ನಾಯಕರಾಗಿದ್ದ ಸಂಗಾಕ್ಕರರನ್ನು ತಂಡದಿಂದ ಕೈಬಿಡಲಾಗಿದೆ.
ಇನ್ನು ಮುಂಬರುವ ಆವೃತ್ತಿಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಕರಾಚಿ ಕಿಂಗ್ಸ್ ತಂಡದ ನಾಯಕರಾಗುವ ಸಾಧ್ಯತೆ ಇದೆ.