ಸಿಡ್ನಿ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಮಸಾಜ್ ಮಾಡುವ ವೇಳೆ ಮಹಿಳಾ ಥೆರಪಿಸ್ಟ್ ಗೆ ಮರ್ಮಾಂಗ ಪ್ರದರ್ಶಿಸಲಾಗಿತ್ತು ಎಂದು ಗೇಯ್ಲ್ ವಿರುದ್ಧ ಆರೋಪ ಕೇಳಿಬಂದಿದ್ದು ಈ ಆರೋಪವನ್ನು ಗೇಯ್ಲ್ ತಿರಸ್ಕರಿಸಿದ್ದಾರೆ.
2015ರ ವಿಶ್ವಕಪ್ ವೇಳೆ ಮಸಾಜ್ ಮಾಡಲು ಬಂದಿದ್ದ ಮಹಿಳೆಗೆ ಕ್ರಿಸ್ ಗೇಯ್ಲ್ ಗುಪ್ತಾಂಗ ಪ್ರದರ್ಶಿಸಿದ್ದರು ಎಂದು ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳು ಗಂಭೀರವಾಗಿ ಆರೋಪಿಸಿದ್ದವು. ಈ ಆರೋಪವನ್ನು ತಳ್ಳಿಹಾಕಿರುವ ಗೇಯ್ಲ್ ತಮ್ಮ ಕುರಿತು ಸುಳ್ಳು ಸುದ್ದಿ ಪ್ರಕಟಿಸಿರುವ ಕೆಲ ಆಸ್ಟ್ರೇಲಯಾ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.