ಮುಂಬೈ: ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 10ನೇ ಸಂಖ್ಯೆ ಜೆರ್ಸಿಯನ್ನು ಧರಿಸಿ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ತಮ್ಮ 10ನೇ ಸಂಖ್ಯೆ ಜೆರ್ಸಿಯನ್ನು ಕೈಬಿಟ್ಟಿದ್ದಾರೆ.
ಟೀಂ ಇಂಡಿಯಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಶಾರ್ದೂಲ್ ಠಾಕೂರ್ ಸದ್ಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿರುವ ಅವರು ಅಭ್ಯಾಸದ ವೇಳೆ 54ನೇ ಸಂಖ್ಯೆಯ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಶ್ರೀಲಂಕಾ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಶಾರ್ದೂಲ್ ಆಗ 10ನೇ ಸಂಖ್ಯೆಯ ಜೆರ್ಸಿಯನ್ನು ಬಳಸಿದ್ದರು. ಅದರಿಂದ ಅವರು ಅಭಿಮಾನಗಳಿಂದ ತೀವ್ರ ಟೀಕೆ ಎದುರಿಸಿದ್ದರು. ಈ ಜೆರ್ಸಿ ಸಚಿನ್ ತೆಂಡೂಲ್ಕರ್ ಗೆ ಮಾತ್ರ ಸೀಮಿತ. ಅದನ್ನು ಬಳಸುವುದು ಸಚಿನ್ ಗೆ ನೀಡಿದ ಅಗೌರವ ಎಂದು ಅಭಿಮಾನಿಗಳು ವಾದಿಸಿದ್ದರು. ಇದೇ ಕಾರಣಕ್ಕೆ ತಮ್ಮ ಜೆರ್ಸಿ ಸಂಖ್ಯೆಯನ್ನು ಬದಲಿಸಿಕೊಂಡಿದ್ದಾರೆಯೇ ಎನ್ನುವುದು ತಿಳಿದುಬಂದಿಲ್ಲ.