ಸೆಹ್ವಾಗ್ ಟ್ವೀಟ್ಗೆ ಹಾಸ್ಯಾತ್ಮಕವಾಗಿ ಟಾಂಗ್ ಕೊಟ್ಟ ರಾಸ್ ಟೇಲರ್
ನ್ಯೂಜಿಲೆಂಡ್ ತಂಡದ ಖ್ಯಾತ ಆಟಗಾರ ರಾಸ್ ಟೇಲರ್ ಅವರನ್ನು ದರ್ಜಿ ಎಂದು ಟ್ವೀಟಿಸಿದ್ದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಗೆ ಟೇಲರ್ ಹಿಂದಿಯಲ್ಲೇ ಟಾಂಗ್...
ನವದೆಹಲಿ: ನ್ಯೂಜಿಲೆಂಡ್ ತಂಡದ ಖ್ಯಾತ ಆಟಗಾರ ರಾಸ್ ಟೇಲರ್ ಅವರನ್ನು ದರ್ಜಿ ಎಂದು ಟ್ವೀಟಿಸಿದ್ದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಗೆ ಟೇಲರ್ ಹಿಂದಿಯಲ್ಲೇ ಟಾಂಗ್ ಕೊಟ್ಟಿದ್ದು ಇದೀಗ ವೈರಲ್ ಆಗಿದೆ.
ಭಾನುವಾರ ನಡೆದ ಭಾರತ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೇಲರ್ ಆಕರ್ಷಕ 95 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಪಂದ್ಯದ ಬಳಿಕ ಟೇಲರ್ ಉದ್ದೇಶಿಸಿ ಟ್ವೀಟ್ ಮಾಡಿದ್ದ ವೀರೂ ದೀಪಾವಳಿ ಹಬ್ಬದ ಒತ್ತಡದ ನಡುವೆಯೂ ಅತ್ಯುತ್ತಮ ಆಟ ಪ್ರದರ್ಶಿಸಿದೀರಿ ದರ್ಜಿ ಜೀ(ಟೇಲರ್) ಎಂದು ಕಾಲೆಳೆದಿದ್ದರು.
ಇದಕ್ಕೆ ಹಿಂದಿಯಲ್ಲೇ ಪ್ರತಿಕ್ರಿಯಿಸಿದ್ದ ರಾಸ್ ಟೇಲರ್ ಮುಂದಿನ ವರ್ಷದ ದೀಪಾವಳಿಯಲ್ಲಾದರೂ ನಿಗದಿತ ಸಮಯದೊಳಗೆ ನಿಮ್ಮ ಬಟ್ಟೆಗಳನ್ನು ಹಿಂದಿರುಗಿಸುತ್ತೇನೆ ಎಂದು ಟ್ವೀಟ್ ಮಾಡಿ ಇಬ್ಬರು ಒಬ್ಬರನ್ನೊಬ್ಬರು ಕೀಟಲೆ ಮಾಡಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.