ಕಿಂಗ್ ಸ್ಟನ್(ವೆಸ್ಟ್ ಇಂಡೀಸ್): ಬಾರ್ಬಡೋಸ್ ಟ್ರೈಡೆಂಟ್ ಪರ ಆಡುತ್ತಿರುವ ಕೈರನ್ ಪೊಲಾರ್ಡ್ ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್)ನಲ್ಲಿ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆಯುವ ಮೂಲಕ ಎವಿನ್ ಲೆವಿಸ್ ಶತಕ ತಪ್ಪಿಸಿದ್ದಾರೆ.
ಕೈರನ್ ಪೊಲಾರ್ಡ್ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದರಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಬಾರ್ಬಡೋಸ್ ಟ್ರೈಡೆಂಟ್ 128 ರನ್ ಗಳಿಸಿತ್ತು. ಸಾಧಾರಣ ಮೊತ್ತ ಗುರಿ ಬೆನ್ನಟ್ಟಿದ ಸೇಂಟ್ ಕಿಟ್ಸ್ ಪರ ಎವಿನ್ ಲೆವಿಸ್ ಸ್ಫೋಟಕ ಬ್ಯಾಟಿಂಗ್ ಮಾಡಿ 32 ಎಸತೆದಲ್ಲಿ 97 ರನ್ ಬಾರಿಸಿದ್ದಾರೆ.
ಲೆವಿಸ್ 97 ರನ್ ಗಳಿಸಿದ್ದಾಗ ತಂಡಕ್ಕೆ ಗೆಲ್ಲಲು ಒಂದು ರನ್ ಅಗತ್ಯವಿತ್ತು. ಶತಕಕ್ಕೆ ಮೂರು ರನ್ ಬೇಕಿದ್ದ ಲೆವಿಸ್ ಎಸೆತವನ್ನು ಬೌಂಡರಿಗಟ್ಟುವ ಯೋಜನೆಯಲ್ಲಿದ್ದರು. ಆ ವೇಳೆ ಬೌಲಿಂಗ್ ಮಾಡಿದ್ದ ಕೈರನ್ ಪೊಲಾರ್ಡ್ ನೋಬಾಲ್ ಎಸೆದಿದ್ದಾರೆ. ಇದರಿಂದ ಲೆವಿಸ್ ಶತಕದಿಂದ ವಂಚಿತರಾಗಿದ್ದಾರೆ.
2010ರಲ್ಲಿ ಟೀಂ ಇಂಡಿಯಾ ಮತ್ತು ಲಂಕಾ ನಡುವಿನ ಏಕದಿನ ಪಂದ್ಯದಲ್ಲೂ ಇದೇ ರೀತಿ ಆಗಿತ್ತು. ವೀರೇಂದ್ರ ಸೆಹ್ವಾಗ್ 99 ರನ್ ಬಾರಿಸಿ ಕ್ರೀಸ್ ನಲ್ಲಿದ್ದರು. ಈ ವೇಳೆ ತಂಡಕ್ಕೆ ಒಂದು ರನ್ ಅಗತ್ಯವಿತ್ತು. ಈ ಹಂತದಲ್ಲಿ ಬೌಲಿಂಗ್ ಮಾಡಿದ್ದ ಲಂಕಾ ಸ್ಪಿನ್ನರ್ ಸೂರಜ್ ರಣದಿವೆ ನೋಬಾಲ್ ಎಸೆದಿದ್ದರು. ಈ ನಂತರ ಸೆಹ್ವಾಗ್ ಅವರಲ್ಲಿ ಸೂರಜ್ ಕ್ಷಮೆ ಕೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics