ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಭದ್ರತೆ ವೈಫಲ್ಯ: ಬಾಂಗ್ಲಾದಲ್ಲಿ ಆಸ್ಟ್ರೇಲಿಯಾ ತಂಡದ ಬಸ್ ಮೇಲೆ ಕಲ್ಲು ತೂರಾಟ

ಹನ್ನೊಂದು ವರ್ಷಗಳ ಬಳಿಕ ಬಾಂಗ್ಲಾದೇಶದಲ್ಲಿ ಟೆಸ್ಟ್ ಸರಣಿ ಆಡಲು ಹೋಗಿದ್ದ ಆಸ್ಟ್ರೇಲಿಯಾ ತಂಡದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಆಸ್ಟ್ರೇಲಿಯಾ
Vishwanath S
Updated On : 5 Sept 2017, 12:57 pm
ಢಾಕಾ: ಹನ್ನೊಂದು ವರ್ಷಗಳ ಬಳಿಕ ಬಾಂಗ್ಲಾದೇಶದಲ್ಲಿ ಟೆಸ್ಟ್ ಸರಣಿ ಆಡಲು ಹೋಗಿದ್ದ ಆಸ್ಟ್ರೇಲಿಯಾ ತಂಡದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. 
ಅಭದ್ರತೆಯಿಂದಾಗಿ ಆಸ್ಟ್ರೇಲಿಯಾ ತಂಡ 2006ರ ನಂತರ ಬಾಂಗ್ಲಾ ನೆಲದಲ್ಲಿ ಯಾವುದೇ ಸರಣಿ ಆಡಲು ಹೋಗಿರಲಿಲ್ಲ. ಆದರೆ ಹನ್ನೊಂದು ವರ್ಷಗಳ ಬಳಿಕ ಇದೀಗ ಟೆಸ್ಟ್ ಸರಣಿ ಆಡಲು ಬಂದಿರುವ ಆಸ್ಟ್ರೇಲಿಯಾ ತಂಡದ ಬಸ್ ಮೇಲೆ ಕಲ್ಲು ತೂರಾಟ ನಡೆಸಿರುವುದು ಭದ್ರತೆ ವೈಫಲ್ಯವನ್ನು ಎತ್ತಿತೋರಿಸುತ್ತಿದೆ. ಕ್ರಿಕೆಟ್ ದೃಷ್ಟಿಯಿಂದ ನೋಡಿದರೇ ಈ ಘಟನೆ ಬಾಂಗ್ಲಾದೇಶ ಕ್ರಿಕೆಟ್ ಗೆ ದೊಡ್ಡ ಹೊಡೆತ ಬೀಳಲಿದೆ. 
ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು ಮುಗಿಸಿ ತಂಡ ಹೊಟೇಲ್ ಗೆ ವಾಪಸ್ಸಾಗುತ್ತಿದ್ದಾಗ ತಂಡದ ಬಸ್ ಮೇಲೆ ಕಲ್ಲು ತೂರಾಟ ನಡೆದಿದ್ದು ಇದರಲ್ಲಿ ಬಸ್ ಗಾಜುಗಳು ಹೊಡೆದಿದ್ದು ಯಾವ ಆಟಗಾರನಿಗೂ ಅಪಾಯವಾಗಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಭದ್ರತಾ ಅಧಿಕಾರಿ ಸಿಯೇನ್ ಕರೋಲ್ ಸ್ಪಷ್ಟಪಡಿಸಿದ್ದಾರೆ. 

Advertisement

Advertisement

ಸ್ಥಳೀಯ ಅಧಿಕಾರಿಗಳೊಂದಿಗೆ ತಂಡದ ಭದ್ರತಾ ಸಿಬ್ಬಂದಿಗಳು ಚರ್ಚಿಸಿ ಘಟನೆಯ ಕುರಿತು ತನಿಖೆಗೆ ಮುಂದಾಗಿದ್ದಾರೆ. ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಗ್ಲಾದೇಶದ ಅಧಿಕಾರಿಗಳು ಆಸ್ಟ್ರೇಲಿಯಾ ತಂಡದ ಓಡಾಡುವ ಜಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. 
ಮುಸ್ಲಿಂ ರಾಷ್ಟ್ರವಾಗಿರುವ ಬಾಂಗ್ಲಾದೇಶದಲ್ಲಿ ದಾಳಿ ಸಂಭವ ಮತ್ತು ಅಭದ್ರತೆ ಹಿನ್ನೆಲೆ ಈ ಹಿಂದೆ 2015ರ ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ ರದ್ದು ಮಾಡಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement