ಮುಂಬೈ: ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಚಿತ್ರ ಸಚಿನ್ ಎ ಬಿಲಿಯನ್ ಡ್ರೀಮ್ಸ್ ವೀಕ್ಷಿಸಿದ 6 ವರ್ಷದ ಬಾಲಕಿಯೊಬ್ಬಳು ಸಚಿನ್ ಅವರಿಗೆ ಪತ್ರವೊಂದನ್ನು ಬರೆದಿದ್ದಾಳೆ.
ತನ್ನ ಕಿರಿಯ ಅಭಿಮಾನಿ ತಾರಾಳ ಪತ್ರವನ್ನು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿರುವ ಸಚಿನ್ ತೆಂಡೂಲ್ಕರ್ ಆಕೆಯ ಪತ್ರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಪತ್ರದಲ್ಲಿ ಪ್ರಿಯ ಸಚಿನ್ ಅಂಕಲ್, ನಿಮ್ಮ ಮಗಳು ಸಾರಾಳಂತೆ ನನ್ನ ಹೆಸರು ತಾರಾ. ಆದರೆ ನನಗೆ ಆರು ವರ್ಷ. ಇತ್ತೀಚೆಗೆ ನಿಮ್ಮ ಚಿತ್ರವನ್ನು ವೀಕ್ಷಿಸಿದೆ. ಬಾಲ್ಯದಲ್ಲಿ ನಿಮ್ಮ ತುಂಟತನವನ್ನು ಕಂಡು ಸಂಕಷ್ಟ ಸಂತಸಪಟ್ಟೆ. ನೀವು ಪಂದ್ಯದಲ್ಲಿ ಸೋತಾಗ ಗಳಗಳನೆ ಅತ್ತೆ. ಸಚಿನ್ ಅಂಕಲ್ ನಿಮ್ಮನ್ನು ಭೇಟಿ ಮಾಡಬೇಕು ಎಂದು ತಾರಾ ಬರೆದಿದ್ದಾಳೆ.