ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ: ಗೆದ್ದವರಿಗೆ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಪಟ್ಟ
ಸೆಪ್ಟೆಂಬರ್ 17ರಿಂದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದ್ದು ಸರಣಿ ಗೆದ್ದವರು ರ‍್ಯಾಂಕಿಂಗ್‌ನಲ್ಲಿ...
ನವದೆಹಲಿ: ಸೆಪ್ಟೆಂಬರ್ 17ರಿಂದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದ್ದು ಸರಣಿ ಗೆದ್ದವರು ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ 117 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು ಮುಂದಿನ ಏಕದಿನ ಸರಣಿಯಲ್ಲಿ ಉಭಯ ತಂಡಗಳಲ್ಲಿ ಒಂದು ತಂಡ 4-1 ಅಂತರದಿಂದ ಸರಣಿ ಗೆದ್ದರೆ ಆ ತಂಡ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.
ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು ವೈಟ್ ವಾಶ್ ಮಾಡಿರುವ ಟೀಂ ಇಂಡಿಯಾಗೆ ಆತ್ಮವಿಶ್ವಾಸ ಹೆಚ್ಚಿದೆ. ಇನ್ನು ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸಹ ಬಲಿಷ್ಠವಾಗಿದ್ದು ಉಭಯ ತಂಡಗಳ ನಡುವೆ ಕಠಿಣ ಸ್ಫರ್ಧೆ ನಡೆಯಲಿದೆ.
ಭಾರತ ಏಕದಿನ ಸರಣಿಯನ್ನು ವೈಟ್ ವಾಶ್ ಮಾಡಿದರೆ 122 ಅಂಕ ಆಸ್ಟ್ರೇಲಿಯಾ 113 ಅಂಕ ಪಡೆಯಲಿದೆ. ಇನ್ನು 4-1 ರಿಂದ ಸರಣಿ ಗೆದ್ದರೆ 120 ಅಂಕ ಆಸ್ಟ್ರೇಲಿಯಾ 114 ಅಂಕ ಪಡೆಯಲಿದೆ.