ಕ್ರಿಕೆಟ್

2019 ವಿಶ್ವಕಪ್ ನಲ್ಲಿಯೂ ಧೋನಿ ಆಡಲಿದ್ದಾರೆ: ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ

Raghavendra Adiga
ನವದೆಹಲಿ: ಭಾರತ ಕ್ರಿಕೆಟ್ ತಂಡದ ತರಬೇತುದಾರ  ರವಿ ಶಾಸ್ತ್ರಿ, ಬಾರತ ಕ್ರಿಕೆಟ್ ತಂದದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತಂತೆ ಮಾತನಾಡಿದ್ದಾರೆ. ಧೋನಿ ಅವರ ಪ್ರಸ್ತುತ ಫಾರ್ಮ್ ಮತ್ತು ಫಿಟ್ ನೆಸ್ ಅನ್ನು ಪರಿಗಣಿಸಿದರೆ ಅವರನ್ನು ಎಂದೂ ತಂಡದಿಂದ ತೆಗೆದು ಹಾಕುವ ಯೋಚನೆ ಮಾಡಲಾಗದು ಎಂದಿದ್ದಾರೆ. 
ಧೋನಿ 82.23 ರ ಸ್ಟ್ರೈಕ್ ರೇಟ್ ನೊಂದಿಗೆ 162 ರನ್ ಗಳಿಸಿ ಶ್ರೀಲಂಕಾ ಸರಣಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಶ್ರೀಲಂಕಾದಲ್ಲಿ 300 ನೇ ಅಂತರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ ಮಾಜಿ ನಾಯಕ, 100 ಸ್ಟಂಪಿಂಗ್ ಮಾಡುವುದರೊಡನೆ ಏಕದಿನ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್-ಕೀಪರ್ ಆಗಿದ್ದರು.
ಧೋನಿ ತನ್ನ ತಂಡದಲ್ಲಿ ಫಿಟ್ ನೆಸ್ ಮತ್ತು ಫಾರ್ಮ್ ಎರಡನ್ನೂ ಹೊಂದಿದ್ದಾರೆ ಮತ್ತು 2019 ರಲ್ಲಿ ನಡೆಯುವ ಏಕದಿನ ವಿಶ್ವ ಕಪ್ ನಲ್ಲಿ ಸಹ ಅವರು ತಂಡಕ್ಕೆ ಅಗತ್ಯವಾಗುತ್ತಾರೆ ಎಂದು ಶಾಸ್ತ್ರಿ ಸಮರ್ಥಿಸಿದರು.
ಶಾಸ್ತ್ರಿ, ಧೋನಿ ಸಾಧನೆಯನ್ನು ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್ ಮತ್ತು ಕಪಿಲ್ ದೇವ್ ಅವರ ಸಾಧನೆಗಳೊದನೆ ಹೋಲಿಸಬಹುದು ಎಂದು ಹೇಳಿದರು.
"ಎಂ.ಎಸ್. ಧೋನಿ ಅವರಂತಹ ದಂತಕಥೆ ಎಲ್ಲಿದೆ? ಧೋನಿ ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಅಥವಾ ಕಪಿಲ್ ದೇವ್ ರಂತೆ ಅದೇ ದಾರಿಯಲ್ಲಿದ್ದಾರೆ ನಾವು ಅವರ ಸಾಧನೆಗಳನ್ನು ಗೌರವಿಸಬೇಕು" ಎಂದು ಶಾಸ್ತ್ರಿ ಬುಧವಾರ ಇಂಡಿಯಾ ಟಿವಿಗೆ ತಿಳಿಸಿದರು.
ನಾಯಕ ಕೊಹ್ಲಿ ಅವರೊಂದಿಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿರುವ ಅನಿಲ್ ಕುಂಬ್ಳೆ ನಿರ್ಗಮನದ ನಂತರ ಈ ವರ್ಷದ ಜುಲೈನಲ್ಲಿ ಭಾರತ ಕೋಚ್ ಆಗಿ ನೇಮಕಗೊಂಡ ರವಿ ಶಾಸ್ತ್ರಿ ಶ್ರೀಲಂಕಾದಲ್ಲಿ ಧೋನಿ ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ಅವರಿಂದ ಇನ್ನೂ ಸಾಕಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವಿದೆ ಎಂದರು.
SCROLL FOR NEXT