ಜೋಹಾನ್ಸ್‌ಬರ್ಗ್: ಟೆಸ್ಟ್ ಮತ್ತು ಫಸ್ಟ್ ಕ್ಲಾಸ್ ಕ್ರಿಕೆಟ್ ಗೆ ದಕ್ಷಿಣ ಆಫ್ರಿಕಾದ ಆಟಗಾರ ಜೆಪಿ ಡುಮಿನಿ ವಿದಾಯ ಘೋಷಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದಿದ್ದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಜೆಪಿ ಡುಮಿನಿ ಅವರನ್ನು ಕೈಬಿಡಲಾಗಿತ್ತು. ಅಂದೇ ತಾವು ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿ ಏಕದಿನ ಮತ್ತು ಟಿ20 ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಡುಮಿನಿ ತೀರ್ಮಾನಿಸಿದ್ದರು. ಅಂತೇ ಇದು ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಜೆಪಿ ಡುಮಿನಿ 46 ಟೆಸ್ಟ್ ಪಂದ್ಯಗಳು ಹಾಗೂ 108 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿದ್ದಾರೆ. 33 ವರ್ಷದ ಡುಮಿನಿ 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದ್ದರು. ಇನ್ನು 33ರ ಸರಾಸರಿಯಲ್ಲಿ 2,103 ರನ್ ಸಿಡಿಸಿದ್ದಾರೆ. ಇನ್ನು ಐದು ಶತಕ ಹಾಗೂ 8 ಅರ್ಧ ಶತಕ ಬಾರಿಸಿದ್ದಾರೆ.