ಕ್ರಿಕೆಟ್

ಹ್ಯಾಟ್ರಿಕ್ ವಿಕೆಟ್ ಹೀರೋ ಕುಲ್‌ದೀಪ್ ಹೊಗಳಿದ ಟೀಂ ಇಂಡಿಯಾ ಆಟಗಾರರು

Vishwanath S
ಕೋಲ್ಕತ್ತಾ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ ಕುಲ್‌ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 
ಏಕದಿನ ಪಂದ್ಯವೊಂದರಲ್ಲಿ ಸ್ಪಿನ್ನರ್ ಓರ್ವ ಹ್ಯಾಟ್ರಿಕ್ ವಿಕೆಟ್ ಪಡೆದಿರುವುದು ಇದೇ ಮೊದಲು. ಇದಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ವೇಗಿಗಳಾದ ಅಜಯ್ ಶರ್ಮಾ ಹಾಗೂ ಕಪಿಲ್ ದೇವ್ ಹ್ಯಾಟ್ರಿಕ್ ಪಡೆದ ಸಾಧನೆ ಮಾಡಿದ್ದಾರೆ. 
ಚೈನಾಮ್ಯಾನ್ ಖ್ಯಾತಿಯ 22 ವರ್ಷದ ಕುಲ್‌ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ (54/3) ಸಾಧನೆಯ ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ 50 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಟೀಂ ಇಂಡಿಯಾದ ಆಟಗಾರರು ಟ್ವೀಟರ್ ನಲ್ಲಿ ಕುಲ್‌ದೀಪ್ ಯಾದವ್ ಸಾಧನೆಯನ್ನು ಹೊಗಳಿದ್ದಾರೆ. 
SCROLL FOR NEXT