ಕ್ರಿಕೆಟ್

ಹ್ಯಾಟ್ರಿಕ್ ಎಸೆತಕ್ಕೂ ಮುನ್ನ ಕುಲದೀಪ್ ಯಾದವ್ ಗೆ ಧೋನಿ ಹೇಳಿದ್ದೇನು?

Srinivasamurthy VN
ಕೋಲ್ಕತಾ: ಆಸ್ಟ್ರೇಲಿಯಾದತ್ತ ವಾಲುತ್ತಿದ್ದ ಪಂದ್ಯವನ್ನು ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಭಾರತದತ್ತ ತಿರುಗಿಸಿದ ಕುಲದೀಪ್ ಯಾದವ್ ಹ್ಯಾಟ್ರಿಕ್ ಎಸೆತಕ್ಕೂ ಮುನ್ನ ತೀವ್ರ ಒತ್ತಡಕ್ಕೆ ಒಳಗಾಗಿದ್ದರಂತೆ. ಆದರೆ ಮಾಜಿ  ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮಾತು ಅವರಿಗೆ ಸ್ಪೂರ್ತಿ ನೀಡಿತಂತೆ...
ನಿನ್ನೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಸ್ಪಿನ್ನರ್ ಕುಲದೀಪ್  ಯಾದವ್ ತಮ್ಮ ಹ್ಯಾಟ್ರಿಕ್ ಎಸೆತದ ಗುಟ್ಟನ್ನ ಬಹಿರಂಗ ಪಡಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಕುಲದೀಪ್ ಯಾದವ್, ಸತತ ಎರಡು ವಿಕೆಟ್ ಗಳನ್ನು ಪಡೆದ ಬಳಿಕ ನಾನು ಕೊಂಚ ಒತ್ತಡಕ್ಕೆ ಒಳಗಾಗಿದ್ದೆ. ಆಗ ನೇರವಾಗಿ  ಧೋನಿ ಬಳಿ ಹೋಗಿ, ಮುಂದಿನ ಎಸೆತದ ಕುರಿತು ಚರ್ಚೆ ನಡೆಸಿದೆ.

"ಧೋನಿ ಭಾಯ್ ಮುಂದಿನ ಎಸೆತ ಹೇಗೆ ಮಾಡಲಿ" ಎಂದು ಕೇಳಿದೆ... ಅದಕ್ಕೆ ಉತ್ತರಿಸಿದ ಧೋನಿ.."ತಲೆ ಕೆಡಿಸಿಕೊಳ್ಳಬೇಡ..ನಿನಗೆ ಹೇಗೆ ಬೇಕೋ ಹಾಗೆ ಮಾಡು".. ಎಂದು ಹೇಳಿ ನನ್ನನ್ನು ಹುರಿದುಂಬಿಸಿದರು. ಅವರ ಈ  ಮಾತುಗಳು ನನಗೆ ತುಂಬಾ ಸ್ಪೂರ್ತಿ ತುಂಬಿತು. ಬಳಿಕದ ಎಸೆತದಲ್ಲೇ ಪಾಟ್ ಕ್ಯುಮಿನ್ಸ್ ರನ್ನು ಔಟ್ ಮಾಡಿದೆ ಎಂದು ಕುಲದೀಪ್ ಯಾದವ್ ತಮ್ಮ ಹ್ಯಾಟ್ರಿಕ್ ವಿಕೆಟ್ ಪಡೆದ ಸಂದರ್ಭವನ್ನು ವಿವರಿಸಿದ್ದಾರೆ.

ಇದೇ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆದ ಕ್ಷಣವನ್ನು ತಮ್ಮ ವೃತ್ತಿ ಜೀವನದ ವಿಶೇಷ ಕ್ಷಣಗಳು ಎಂದು ಬಣ್ಣಿಸಿರುವ ಕುಲದೀಪ್ ಯಾದವ್, ಈ ಸಂದರ್ಭ ಇಡೀ ಪಂದ್ಯವನ್ನೇ ಬದಲಿಸಲು ಸಹಕಾರಿಯಾಯಿತು. ನನ್ನ ಮೊದಲ ಐದು  ಓವರ್ ಗಳಲ್ಲಿ ನಾನು ಸಾಕಷ್ಟು ಶ್ರಮ ಪಟ್ಟೆ.. ಪ್ರಮುಖವಾಗಿ ಪಿಚ್ ನ ಕೆಲ ನಿರ್ದಿಷ್ಟ ಭಾಗಗಳಲ್ಲಿ ಚೆಂಡನ್ನು ಪಿಚ್ ಮಾಡಲು ಯತ್ನಿಸುತ್ತಿದ್ದೆ. ಆದರೆ ಬಳಿ ಅದು ಸರಾಗವಾಯಿತು ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.
SCROLL FOR NEXT