ವಾಷಿಂಗ್ಟನ್ ಸುಂದರ್ 
ಕ್ರಿಕೆಟ್

ದುಲೀ‍ಪ್‌ ಟ್ರೋಫಿ ಕ್ರಿಕೆಟ್: ಇಂಡಿಯಾ ರೆಡ್‌ ಗೆ ಚಾಂಪಿಯನ್ ಪಟ್ಟ

ವಾಷಿಂಗ್ಟನ್‌ ಸುಂದರ್‌ ಮತ್ತು ವಿಜಯ್‌ ಗೋಹಿಲ್‌ ಅವರುಗಳ ಅದ್ಭುತ ಬೌಲಿಂಗ್‌ ಬಲದಿಂದ ಇಂಡಿಯಾ ರೆಡ್‌ ತಂಡ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ 163 ರನ್‌ ಗಳಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಲಖ್ನೋ: ವಾಷಿಂಗ್ಟನ್‌ ಸುಂದರ್‌ ಮತ್ತು ವಿಜಯ್‌ ಗೋಹಿಲ್‌ ಅವರುಗಳ ಅದ್ಭುತ ಬೌಲಿಂಗ್‌ ಬಲದಿಂದ ಇಂಡಿಯಾ ರೆಡ್‌ ತಂಡ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ 163 ರನ್‌ ಗಳಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇಂಡಿಯಾ ಬ್ಲೂ ತಂಡದ ವಿರುದ್ಧ ಏಕಾನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 7 ವಿಕೆಟ್‌ ಗೆ 187 ರನ್‌ ಗಳಿಂದ ನಿನ್ನೆಯ ಆಟ ಪ್ರಾರಂಭಿಸಿ ರೆಡ್‌ ತಂಡ ಎರಡನೇ ಇನಿಂಗ್ಸ್‌ನಲ್ಲಿ 67.5 ಓವರ್ ಗೆ 208 ರನ್ ಗಳಿಸಿತು.  ಗೆಲುವಿಗೆ 393 ರನ್‌ಗಳ ಗುರಿ ಪಡೆದು ಎರಡನೇ ಇನಿಂಗ್ಸ್‌ ಪ್ರಾರಂಭಿಸಿದ ಸುರೇಶ್‌ ರೈನಾ ನಾಯಕತ್ವದ ರೆಡ್‌ ತಂಡ ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ರೆಡ್ ತಂಡ 48 ಓವರ್‌ಗಳಲ್ಲಿ 229ರನ್‌ ಕಲೆಹಾಕಿ ತನ್ನ ಆಟ ಕೊನೆಗೊಳಿಸಿತು.ಈ ಗುರಿ ಬೆನ್ನಟ್ಟಿದ ಬ್ಲೂ ತಂಡ 48 ಓವರ್‌ಗಳಲ್ಲಿ 229 ರನ್ ಗಳಿಸಲಷ್ಟೇ ಯಶಸ್ವಿಯಾಗಿತ್ತು. 
ಸಂಕ್ಷಿ‍ಪ್ತ ಸ್ಕೋರ್‌: ಇಂಡಿಯಾ ರೆಡ್‌: ಮೊದಲ ಇನಿಂಗ್ಸ್‌:127.2 ಓವರ್‌ಗಳಲ್ಲಿ 483 ಮತ್ತು 67.5 ಓವರ್‌ಗಳಲ್ಲಿ 208 (ವಾಷಿಂಗ್ಟನ್ ಸುಂದರ್‌ 42, ಸೂರ್ಯಕುಮಾರ್‌ ಯಾದವ್‌ 22, ಸಿದ್ದಾರ್ಥ್‌ ಕೌಲ್‌ 17; ಭಾರ್ಗವ್‌ ಭಟ್‌ 77ಕ್ಕೆ4, ಅಕ್ಷಯ್‌ ವಾಖರೆ 66ಕ್ಕೆ4, ಜಯದೇವ್‌ ಉನದ್ಕತ್‌ 18ಕ್ಕೆ1).
ಇಂಡಿಯಾ ಬ್ಲೂ: ಪ್ರಥಮ ಇನಿಂಗ್ಸ್‌: 67 ಓವರ್‌ಗಳಲ್ಲಿ 299 ಮತ್ತು 48 ಓವರ್‌ಗಳಲ್ಲಿ 229 (ಅಭಿಮನ್ಯು ಈಶ್ವರನ್‌ 21, ಇಶಾನ್ ಕಿಶನ್‌ 18, ಮನೋಜ್‌ ತಿವಾರಿ 38, ಸುರೇಶ್‌ ರೈನಾ 45, ಜಯದೇವ್‌ ಉನದ್ಕತ್‌ 10, ಭಾರ್ಗವ್‌ ಭಟ್‌ 51, ಇಶಾಂತ್‌ ಶರ್ಮಾ ಔಟಾಗದೆ 20; ವಾಷಿಂಗ್ಟನ್‌ ಸುಂದರ್‌ 87ಕ್ಕೆ6, ವಿಜಯ್‌ ಗೋಹಿಲ್‌ 102ಕ್ಕೆ3, ಸೂರ್ಯಕುಮಾರ್‌ ಯಾದವ್‌ 1ಕ್ಕೆ1).
ಫಲಿತಾಂಶ: ಇಂಡಿಯಾ ರೆಡ್‌ ತಂಡಕ್ಕೆ 163ರನ್‌ ಗೆಲುವು 
ಪಂದ್ಯಶ್ರೇಷ್ಠ: ವಾಷಿಂಗ್ಟನ್‌ ಸುಂದರ್‌.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT